ಮುಂಬೈ: ಬುಡಾಪೆಸ್ಟ್‌ನಲ್ಲಿ 'ಧಾಕಡ್' ಚಿತ್ರೀಕರಣ ಮುಗಿದ ನಂತರ ನಟ ಅರ್ಜುನ್ ರಾಂಪಾಲ್ ತಮ್ಮ ಹಿರಿಯ ಮಗಳು ಮಹಿಕಾ ಅವರೊಂದಿಗೆ ಅತ್ಯುತ್ತಮವಾದ ಸಮಯ ಕಳೆಯಲು ಲಂಡನ್‌ಗೆ ತೆರಳಿದ್ದಾರೆ. ಮಗಳು ಮಹಿಕಾ ಮತ್ತು ಅವಳ ಸಹಪಾಠಿಗಳನ್ನು ಭೇಟಿಯಾದ ಒಂದು ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ.
ಲಂಡನ್ನಲ್ಲಿ ಮಗಳೊಂದಿಗೆ ಸಮಯ ಕಳೆಯುತ್ತಿರುವ ನಟ ಅರ್ಜುನ್ ರಾಂಪಾಲ್ - ಅರ್ಜುನ್ ರಾಂಪಾಲ್ ಲೇಟೆಸ್ಟ್ ನ್ಯೂಸ್
ನಟ ಅರ್ಜುನ್ ರಾಂಪಾಲ್ ತಮ್ಮ ಹಿರಿಯ ಮಗಳು ಮಹಿಕಾ ಅವರೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲು ಲಂಡನ್‌ಗೆ ತೆರಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ನಟ ಅರ್ಜುನ್ ರಾಂಪಾಲ್, ''ಡ್ಯಾಡಿಸ್ ಡೇ ಔಟ್. ಮಹಿಕಾ ಮತ್ತು ಅವರ ಕೆಲವು ಸಹಪಾಠಿಗಳೊಂದಿಗೆ ಅದ್ಭುತ ದಿನವನ್ನು ಕಳೆದಿದ್ದೇನೆ. ಅವರೊಂದಿಗೆ ಗುಣಮಟ್ಟದ ಚರ್ಚೆ ನಡೆದಿದೆ. ಈ ಮಹತ್ವಾಕಾಂಕ್ಷಿ ಯುವ ಫಿಲ್ಮ್ಮೇಕರ್ಸ್/ತಾರೆಯರು ಅವರ ವಿಶೇಷ ಕ್ಯಾಂಪಸ್‌ನ ಪ್ರವಾಸವನ್ನು ನನಗೆ ನೀಡಿದರು'' ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಅರ್ಜುನ್ ರಾಂಪಾಲ್, ಮಹಿಕಾ ಮತ್ತು ಅವರ ಸ್ನೇಹಿತರೊಂದಿಗಿನ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಧಾಕಡ್ ಚಿತ್ರದ ಮುಂಬರುವ ಚಿತ್ರೀಕರಣದಲ್ಲಿ ನಟ ಅರ್ಜುನ್ ರಾಂಪಾಲ್, ಖಳನಾಯಕ ರುದ್ರವೀರ್ ಪಾತ್ರದಲ್ಲಿ ನಟಿಸಲಿದ್ದಾರೆ.