ಬಾಲಿವುಡ್ ಸಿನಿಮಾ ತಯಾರಕರಿಗೆ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಆಸಕ್ತಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬಹಳಷ್ಟು ದಕ್ಷಿಣ ಭಾರತದ ಸಿನಿಮಾಗಳು ಹಿಂದಿಗೆ ರಿಮೇಕ್ ಆಗುತ್ತಿವೆ. ಗುರುನಂದನ್ ಅಭಿನಯದ ಕನ್ನಡದ 'ರಾಜು ಕನ್ನಡ ಮೀಡಿಯಂ' ಹಿಂದಿಗೆ ರಿಮೇಕ್ ಆಗುತ್ತಿದ್ದು ಅಮೀರ್ ಖಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ.
16 ವರ್ಷ ಕೋಮಾಕ್ಕೆ ತೆರಳಲಿದ್ದಾರೆ ಅರ್ಜುನ್ ಕಪೂರ್...! - ಬಾಲಿವುಡ್ ರೀಮೇಕ್ ಸಿನಿಮಾ
ಇತ್ತೀಚೆಗೆ ಬಿಡುಗಡೆಯಾದ 'ಕೋಮಾಲಿ' ತಮಿಳು ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದ್ದು, ಅರ್ಜುನ್ ಕಪೂರ್ ನಾಯಕನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಬೋನಿ ಕಪೂರ್ ಈ ಚಿತ್ರದ ರಿಮೇಕ್ ಹಕ್ಕು ಪಡೆದಿದ್ದು, ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
ಇನ್ನು ಬಹಳಷ್ಟು ತೆಲುಗು, ತಮಿಳು ಸಿನಿಮಾಗಳು ಕೂಡಾ ಹಿಂದಿಗೆ ರಿಮೇಕ್ ಆಗುತ್ತಿವೆ. ಇದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಶಾಹೀದ್ ಕಪೂರ್ ಅಭಿನಯದ 'ಕಬೀರ್ ಸಿಂಗ್' ಸಾಕ್ಷಿ. ಅರ್ಜುನ್ ರೆಡ್ಡಿ ರಿಮೇಕ್ ಆದ ಈ ಸಿನಿಮಾ ಒಳ್ಳೆ ಪ್ರತಿಕ್ರಿಯೆ ಪಡೆದಿತ್ತು.
ಇದೀಗ ಕಳೆದ ತಿಂಗಳು ಬಿಡುಗಡೆಯಾದ ತಮಿಳಿನ ಹಿಟ್ ಸಿನಿಮಾವೊಂದು ಹಿಂದಿಗೆ ರಿಮೇಕ್ ಆಗುತ್ತಿದೆ. ಜಯರಾಮ್ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಕೋಮಾಲಿ' ಎಂಬ ಸಿನಿಮಾ ಅದ್ಭುತ ವಿಜಯ ಸಾಧಿಸಿದೆ. ಈ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದ್ದು, ಅರ್ಜುನ್ ಕಪೂರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ನಾಯಕ ಆಕಸ್ಮಿಕವಾಗಿ 16 ವರ್ಷಗಳ ಕಾಲ ಕೋಮಾಗೆ ಹೋಗುತ್ತಾನೆ. ಮತ್ತೆ ಆತ ಸಾಮಾನ್ಯ ಸ್ಥಿತಿಗೆ ಬಂದ ನಂತರ ಅವನಿಗೆ ಉಂಟಾಗುವ ಅನುಭವಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದ ರಿಮೇಕ್ ಹಕ್ಕನ್ನು ಬೋನಿ ಕಪೂರ್ ಪಡೆದಿದ್ದು, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.