ಹೈದರಾಬಾದ್ :ಬಾಲಿವುಡ್ ನಟ ಅರ್ಜುನ್ ಕಪೂರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅರ್ಜುನ್ಗೆ ಅವರ ಗೆಳತಿಯಾಗಿರುವ ಬಾಲಿವುಡ್ ನಟಿ ಮಲೈಕಾ ಅರೋರಾ ವಿಶೇಷವಾಗಿ ಶುಭ ಕೋರಿದ್ದಾರೆ.
ಮಲೈಕಾ ಅರೋರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅರ್ಜುನ್ ಕಪೂರ್ ಜೊತೆಗಿರುವ ಒಂದು ಸುಂದರ ಫೋಟೋದೊಂದಿಗೆ 'ಹ್ಯಾಪಿ ಬರ್ತ್ಡೇ ಸನ್ಶೈನ್' ಎಂದು ಬರೆದು ಶುಭ ಕೋರಿದ್ದಾರೆ.
ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಕೂಡ ಬಾಲ್ಯದ ನೆನಪುಗಳನ್ನು ಮರುಕಳಿಸುವಂತಹ ಫೋಟೋವನ್ನು ಹಾಕಿ ಅಣ್ಣನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ನಾನು ನೋಡಿದ ಅತ್ಯುತ್ತಮ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ಲವ್ ಯೂ ಎಂದು ಬರೆದುಕೊಂಡಿದ್ದಾರೆ.
ಇನ್ನು, ಬಾಲಿವುಡ್ ತಾರೆಯರಾದ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ, ಮನೀಶ್ ಮಲ್ಹೋತ್ರಾ, ಕರೀನಾ ಕಪೂರ್ ಖಾನ್, ಆಯುಷ್ಮಾನ್ ಖುರಾನಾ, ಜಾಕ್ವೆಲಿನ್ ಫರ್ನಾಂಡೀಸ್, ಹುಮಾ ಖುರೇಷಿ ಸೇರಿದಂತೆ ಅನೇಕರು ಅರ್ಜುನ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.