ಕರ್ನಾಟಕ

karnataka

ETV Bharat / sitara

ಮೋನಾ ಶೌರಿ ಕಪೂರ್ ಜನ್ಮದಿನ: ತಾಯಿ ನೆನೆದು ಅರ್ಜುನ್ ಕಪೂರ್ ಭಾವನಾತ್ಮಕ ಪೋಸ್ಟ್‌ - ಮೋನಾ ಶೌರಿ ಕಪೂರ್ ಜನ್ಮದಿನ ಅರ್ಜುನ್ ಕಪೂರ್ ಭಾವನಾತ್ಮಕ ಪೋಸ್ಟ್‌

ನಟ ಅರ್ಜುನ್ ಕಪೂರ್ ಇನ್‌ಸ್ಟಾಗ್ರಾಮ್ ನಲ್ಲಿ ತನ್ನ ತಾಯಿ ಮೋನಾ ಶೌರಿ ಕಪೂರ್ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಕೆಯ ಭಾವಚಿತ್ರದ ಮುಂದೆ ಹಲವಾರು ಹೂಗುಚ್ಛಗಳನ್ನು ಇಟ್ಟು, "ಹುಟ್ಟುಹಬ್ಬದ ಶುಭಾಶಯಗಳು ಅಮ್ಮ" ಎಂದು ಬರೆದ್ದಾರೆ.

Arjun Kapoor pens emotional note on his mom
ತಾಯಿ ನೆನೆದು ಅರ್ಜುನ್ ಕಪೂರ್ ಭಾವನಾತ್ಮಕ ಪೋಸ್ಟ್‌

By

Published : Feb 4, 2022, 2:21 PM IST

ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ತಮ್ಮ ತಾಯಿ ಮೋನಾ ಶೌರಿ ಕಪೂರ್ ಅವರನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ. ಫೆಬ್ರವರಿ 3 ರಂದು, ನಟ ತನ್ನ ತಾಯಿಯ 58ನೇ ಜನ್ಮದಿನ ಹಿನ್ನೆಲೆ ಇನ್‌ಸ್ಟಾಗ್ರಾಮ್​​ನಲ್ಲಿ ಭಾವನಾತ್ಮಕ ಪೋಸ್ಟ್‌ ಮಾಡಿದ್ದಾರೆ.

ತಾಯಿ ನೆನೆದು ಅರ್ಜುನ್ ಕಪೂರ್ ಭಾವನಾತ್ಮಕ ಪೋಸ್ಟ್‌

ಇದನ್ನೂ ಓದಿ:ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಮತ್ತೊಂದು ತಾರಾ ಜೋಡಿ: ಯಾರು ಗೊತ್ತಾ?

ಬೋನಿ ಕಪೂರ್ ಮತ್ತು ಅವರ ಮೊದಲ ಪತ್ನಿ ಮೋನಾ ಶೌರಿ ಕಪೂರ್ ಅವರ ಪುತ್ರ ಅರ್ಜುನ್ ಕಪೂರ್ ಅವರು ತಮ್ಮ ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬ ಸಂಬಂಧಗಳ ಬಗ್ಗೆ ಹೆಚ್ಚು ವಿಚಾರಗಳನ್ನು ಶೇರ್​​ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್ ನಲ್ಲಿ ಅರ್ಜುನ್ ಕಪೂರ್ ತಮ್ಮ ತಾಯಿಯ ಭಾವಚಿತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಭಾವಚಿತ್ರದ ಮುಂದೆ ಹಲವಾರು ಹೂಗುಚ್ಛಗಳನ್ನು ಇಟ್ಟು, "ಹುಟ್ಟುಹಬ್ಬದ ಶುಭಾಶಯಗಳು ಅಮ್ಮ" ಎಂದು ಬರೆದ್ದಾರೆ. ಶೀರ್ಷಿಕೆಯಲ್ಲಿ ನನ್ನ ಫೋನ್‌ನಲ್ಲಿ ನಿಮ್ಮ ಹೆಸರನ್ನು ನೋಡುವುದನ್ನು ನಾನು ಮಿಸ್​​ಮಾಡಿಕೊಳ್ಳುತ್ತೇನೆ. ನೀನಿಲ್ಲದೇ ನಾನು ಅಪೂರ್ಣವಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details