ಸುದೀಪ್ ಬಾಲಿವುಡ್ನ ದಬಾಂಗ್-3 ಚಿತ್ರದಲ್ಲಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಶೂಟಿಂಗ್ನಲ್ಲೂ ಪಾಲ್ಗೊಂಡು ಅಭಿನಯಿಸಿದ್ದಾರೆ. ಇವರ ನಟನೆಗೆ ನಿರ್ಮಾಪಕ ಹಾಗೂ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮನಸೋತಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಎಲ್ಲರೆದುರು ಕಿಚ್ಚನ ಅಭಿನಯದ ಗುಣಗಾನ ಮಾಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನಲ್ಲಿ ಸುದೀಪ್ ಅವರನ್ನು ಹಾಡಿ ಹೊಗಳಿರುವ ಅರ್ಬಾಜ್, ನೆಗೆಟಿವ್ ಪಾತ್ರಕ್ಕೆ ನಟರ ಹುಡುಕಾಟದಲ್ಲಿದ್ದಾಗ ಸುದೀಪ್ ಹೆಸರು ನೆನಪಾಯಿತು. ಈ ಮೊದಲು ಅವರು ಸಾಕಷ್ಟು ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಹಾಗಾಗಿ ನಿರ್ದೇಶಕ ಪ್ರಭುದೇವ್ ಸಹ ನನ್ನ ಆಯ್ಕೆಗೆ ಸಮ್ಮತಿಸಿದರು. ನಮ್ಮ ಆಹ್ವಾನವನ್ನು ಸುದೀಪ್ ಖುಷಿಯಿಂದಲೇ ಒಪ್ಪಿಕೊಂಡರು. ಇದೀಗ ಚಿತ್ರೀಕರಣ ಕೊನೆ ಹಂತಕ್ಕೆ ಬಂದು ತಲುಪಿದೆ. ಸೆಟ್ನಲ್ಲಿ ಸುದೀಪ್ ನಟನೆ ನೋಡಿ ಖುಷಿಯಾಗಿದೆ, ಅವರ ಅಸಾಧಾರಣ ಅಭಿನಯ ಕೌಶಲ್ಯ ಮೆಚ್ಚುವಂತದ್ದು ಎಂದು ವರ್ಣಿಸಿದ್ದಾರೆ.