ಹೈದರಾಬಾದ್ :ನಟಿ ಅನುಷ್ಕಾ ಶರ್ಮಾ ತಮ್ಮ ಸಾಕು ಪ್ರಾಣಿಗಳೊಂದಿಗೆ ಕಳೆದ ವಿಶೇಷ ಹಾಗೂ ಅಮೂಲ್ಯ ಸಮಯದ ವಿಡಿಯೋವೊಂದನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾಕುಪ್ರಾಣಿಗಳೊಂದಿಗೆ ಆಟವಾಡುವ ವಿಡಿಯೋ ಹಂಚಿಕೊಂಡ ಅನುಷ್ಕಾ ಶರ್ಮಾ.. - ಅನುಷ್ಕಾ ಮತ್ತು ವಿರಾಟ್
ನವದೀಪ್ ಸಿಂಗ್ ನಿರ್ದೇಶನದ ಕನೆಡ ಮತ್ತು ಕ್ರಿಕೆಟರ್ ಜುಲಾನ್ ಗೋಸ್ವಾಮಿ ಜೀವನ ಚರಿತ್ರೆಯಲ್ಲಿ ಅವರು ಕಾಣಿಸಲಿದ್ದಾರೆ. ಅನುಷ್ಕಾ ಕೊನೆಯ ಬಾರಿಗೆ 2018ರಲ್ಲಿ ಝೀರೋ ಚಿತ್ರದಲ್ಲಿ ಕಾಣಿಸಿದ್ದರು..
ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡ ವಿಡಿಯೋದಲ್ಲಿ, ಅನುಷ್ಕಾ ಮತ್ತು ವಿರಾಟ್ ತಮ್ಮ ಸಾಕು ಪ್ರಾಣಿಗಳೊಂದಿಗೆ ಆಟವಾಡುವುದು ಮತ್ತು ಅವುಗಳಿಗೆ ಆಹಾರ ನೀಡುವುದು ಕಂಡು ಬರುತ್ತದೆ. ಅವರು ಬೀದಿ ನಾಯಿಗಳಿಗೂ ಆಹಾರ ನೀಡುತ್ತಿರುವುದು ವಿಡಿಯೋದಲ್ಲಿದೆ. ವಿಡಿಯೋ ಹಂಚಿಕೊಂಡ ಅನುಷ್ಕಾ, "ಕಳೆದ ವರ್ಷದಿಂದ ಕೆಲ ವಿಶೇಷ, ಅಮೂಲ್ಯ ಕ್ಷಣಗಳು❤️" ಎಂದು ಬರೆದಿದ್ದಾರೆ.
ಅನುಷ್ಕಾ ಸದ್ಯ ಎರಡು ಚಿತ್ರಗಳನ್ನು ಹೊಂದಿದ್ದಾರೆ. ನವದೀಪ್ ಸಿಂಗ್ ನಿರ್ದೇಶನದ ಕನೆಡ ಮತ್ತು ಕ್ರಿಕೆಟರ್ ಜುಲಾನ್ ಗೋಸ್ವಾಮಿ ಜೀವನ ಚರಿತ್ರೆಯಲ್ಲಿ ಅವರು ಕಾಣಿಸಲಿದ್ದಾರೆ. ಅನುಷ್ಕಾ ಕೊನೆಯ ಬಾರಿಗೆ 2018ರಲ್ಲಿ ಝೀರೋ ಚಿತ್ರದಲ್ಲಿ ಕಾಣಿಸಿದ್ದರು.