ಮುಂಬೈ:ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಹೆರಿಗೆ ನಂತರ ಮತ್ತೆ ಸಿನಿಮಾ ಸೆಟ್ಗೆ ಆಗಮಿಸುತ್ತೇನೆ ಎಂದಿದ್ದಾರೆ.
ಮೊದಲ ಮಗುವಿನ ಹೆರಿಗೆ ನಂತರ ಮತ್ತೆ ಶೂಟಿಂಗ್‌ಗೆ ಬರುತ್ತೇನೆ. ನಟಿ ಮತ್ತು ತಾಯಿಯಾಗಿ ನನ್ನ ಜೀವನವನ್ನು ಸಮತೋಲನವಾಗಿ ನಡೆಸಲು ಇಷ್ಟಪಡುತ್ತೇನೆ ಎಂದು ಅನುಷ್ಕಾ ಹೇಳಿದ್ದಾರೆ.
"ಸೆಟ್‌ನಲ್ಲಿರುವುದು ನನಗೆ ತುಂಬಾ ಸಂತೋಷ ಉಂಟುಮಾಡುತ್ತದೆ ಮತ್ತು ಮುಂದಿನ ಕೆಲವು ದಿನಗಳವರೆಗೆ ನಾನು ನಿರಂತರವಾಗಿ ಶೂಟಿಂಗ್‌ಗೆ ಹೋಗುತ್ತಿದ್ದೇನೆ. ನನ್ನ ಮೊದಲ ಮಗುವಿನ ಹೆರಿಗೆ ನಂತರ ನಾನು ಮತ್ತೆ ಶೂಟಿಂಗ್‌ಗೆ ಬರುತ್ತೇನೆ. ನನ್ನ ಮನೆ ಮತ್ತು ನನ್ನ ವೃತ್ತಿಪರ ಜೀವನವನ್ನು ಸಮತೋಲನವಾಗಿ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ನಾನು ಬದುಕಿರುವವರೆಗೂ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸುತ್ತೇನೆ. ಏಕೆಂದರೆ ನಟನೆ ನನಗೆ ನಿಜವಾಗಿಯೂ ಸಂತೋಷವನ್ನು ನೀಡುತ್ತದೆ" ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹೇಳಿದ್ದಾರೆ.