ಕರ್ನಾಟಕ

karnataka

ETV Bharat / sitara

ಮತ್ತೊಂದು ಬೇಬಿ ಬಂಪ್ ಫೋಟೋ ಷೇರ್ ಮಾಡಿದ ಅನುಷ್ಕಾ ಶರ್ಮ - Anushka sharma Baby bump

ಮೊದಲನೆ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್​​​ ನಟಿ ಅನುಷ್ಕಾ ಶರ್ಮ ಭಾನುವಾರ ಬೇಬಿ ಬಂಪ್​​ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಸುಮಾರು 4 ಮಿಲಿಯನ್​​​ಗೂ ಹೆಚ್ಚು ಮಂದಿ ಫೋಟೋಗೆ ಲೈಕ್ ಮಾಡಿದ್ದಾರೆ.

Anushka baby bump
ಅನುಷ್ಕಾ ಶರ್ಮ ಬೇಬಿ ಬಂಪ್

By

Published : Sep 14, 2020, 12:33 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ನಾವು ಮೂವರಾಗುತ್ತಿದ್ದೇವೆ ಎಂಬ ಸಂತೋಷ ವಿಚಾರವನ್ನು ಇತ್ತೀಚೆಗಷ್ಟೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಮೆಚ್ಚಿನ ನಟಿ, ಕ್ರಿಕೆಟಿಗ ತಂದೆ-ತಾಯಿಗಳಾಗುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಇಬ್ಬರಿಗೂ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು.

ನಿನ್ನೆ ಅನುಷ್ಕಾ ತಮ್ಮ ಬೇಬಿ ಬಂಪ್ ಹೊಸ ಫೋಟೋವೊಂದನ್ನು ತಮ್ಮ ಇನ್ಸ್​​ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅನುಷ್ಕಾ ಬೇಬಿ ಬಂಪ್ ಮೇಲೆ ಕೈಯಿಟ್ಟು ಮುಖದಲ್ಲಿ ಖುಷಿಯ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. 'ಸೃಷ್ಟಿಯ ಈ ಸುಂದರ ಅನುಭವವನ್ನು ಅನುಭವಿಸುವುದಕ್ಕಿಂದ ಹೆಚ್ಚಿನ ಖುಷಿ ಮತ್ತೊಂದಿಲ್ಲ' ಎಂದು ಬರೆದುಕೊಂಡಿದ್ದಾರೆ. ಅನುಷ್ಕಾ ಷೇರ್ ಮಾಡಿರುವ ಈ ಫೋಟೋಗೆ ಲಕ್ಷಾಂತರ ಅಭಿಮಾನಿಗಳು ಲೈಕ್ಸ್, ಕಮೆಂಟ್ಸ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮ

ಅನುಷ್ಕಾ, ವಿರಾಟ್ ಕೊಹ್ಲಿ ಬಹಳ ದಿನಗಳಿಂದ ಪ್ರೀತಿಸುತ್ತಿದ್ದು 2017 ರಲ್ಲಿ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಈ ದಂಪತಿ ಮೊದಲನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ABOUT THE AUTHOR

...view details