ಹೈದರಾಬಾದ್: ಹಾಲಿವುಡ್ ಮೇವರಿಕ್ ಕ್ವೆಂಟಿನ್ ಟ್ಯಾರಂಟಿನೊರ 2003ರಲ್ಲಿ ಬಿಡುಗಡೆಯಾದ ಕಿಲ್ ಬಿಲ್ ವ್ಯಾಲುಮ್ 1 ಅನ್ನು ರೀಮೇಕ್ ಮಾಡಲು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಸಜ್ಜಾಗುತ್ತಿದ್ದಾರಂತೆ.
ವರದಿಗಳ ಪ್ರಕಾರ, ಅನುರಾಗ್ ಟ್ಯಾರಂಟಿನೊ ಅವರ ಪಾಪ್ ಕ್ಲಾಸಿಕ್ ಚಲನಚಿತ್ರ ಸರಣಿಯ ಕಿಲ್ ಬಿಲ್ನ ದೇಸಿ ಆವೃತ್ತಿಗೆ ಕೈ ಹಾಕುತ್ತಿದ್ದಾರಂತೆ. ಚಿತ್ರದಲ್ಲಿ ಕೃತಿ ಸನೊನ್ ಮತ್ತು ಟೈಗರ್ ಶ್ರಾಫ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಆ್ಯಕ್ಷನ್-ಥ್ರಿಲ್ಲರ್ನಲ್ಲಿ ಗಣಪಥ್ ಸಹ ಬಣ್ಣ ಹಚ್ಚಲಿದ್ದಾರೆ.