ಮುಂಬೈ: ಚಿತ್ರರಂಗದಲ್ಲಿರುವ ಸ್ವಜನ ಪಕ್ಷಪಾತ, ಒಳಗಿನವರು ಮತ್ತು ಹೊರಗಿನವರು ಎಂಬ ವಿಷಯದ ಕುರಿತಾಗಿ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಸರಣಿ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಉದ್ಯಮ ಪರ ವಾದ ಮತ್ತು ಸ್ಪಾಟ್ ಬಾಯ್ಸ್, ಕಿರಿಯ ಕಲಾವಿದರು ಅಥವಾ ತಂತ್ರಜ್ಞರನ್ನು ಸೆಟ್ಗಳಲ್ಲಿ ಯಾವ ರೀತಿ ಪರಿಗಣಿಸುತ್ತಾರೆ ಎಂಬುವುದರ ಕುರಿತು ಕಶ್ಯಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
"ಸ್ನೇಹಿತರೇ, ಒಂದು ವಿಚಿತ್ರ ಚರ್ಚೆ ನಡೆಯುತ್ತಿದೆ. ಚಲನಚಿತ್ರಗಳಲ್ಲಿ ಕೇವಲ ನಟರು ಮಾತ್ರ ಕೆಲಸ ಮಾಡಲ್ಲ. ಒಳಗಿನವರು, ಹೊರಗಿನವರು ಸೇರಿ ಕನಿಷ್ಠ 150 ಜನ ಸೆಟ್ನಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಅವರು ಪರಸ್ಪರ ಗೌರವಿಸುವುದನ್ನು ಕಲಿಯುತ್ತಾರೆ. ಅಲ್ಲಿ ನಡೆಸುವ ಸಂಭಾಷಣೆ ಸ್ವಜನ ಪಕ್ಷಪಾತ ಅಥವಾ ಪರ ವಾದದ ಬಗ್ಗೆಯೂ ಆಗಿರಬಹುದು" ಎಂದು ಕಶ್ಯಪ್ ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್ ಮಾಡಿರುವ ಅವರು, "ಯಾವ ನಟ, ನಟಿ ಸೆಟ್ನಲ್ಲಿ ಕೆಟ್ಟದ್ದಾಗಿ ನಡೆದುಕೊಳ್ಳುತ್ತಾರೆ ಎಂಬುವುದನ್ನು ಕೆಲಸಗಾರರಿಂದ ತಿಳಿದುಕೊಳ್ಳಬೇಕು. ಬಳಿಕ ಅ ನಟನಿರುವ ಸೆಟ್ಗೆ ಹೋಗಬೇಕು. ಬಳಿಕ ಆ ಚಿತ್ರದ ಸಹ ನಟರ ಹಳೆಯ ಸಂದರ್ಶನಗಳನ್ನು ಮತ್ತು ಯಾಕೆ ಚಿತ್ರ ತಂಡ ತೊರೆದರು ಎಂಬುವುದನ್ನು ತಿಳಿದುಕೊಳ್ಳಬೇಕು ಕಶ್ಯಪ್ ಅಭಿಪ್ರಾಯ ಹಂಚಿಕೊಂಡಿದ್ದು, ನೀವು ಇತರರನ್ನು ಯಾವ ರೀತಿ ನೋಡುತ್ತೀರೋ ಅದೇ ರೀತಿ ನಿಮ್ಮನ್ನು ಇತರರು ನೋಡುತ್ತಾರೆ" ಎಂದು ಬರೆದುಕೊಂಡಿದ್ದಾರೆ.
100 ಕ್ಕೂ ಹೆಚ್ಚು ಜನರ ಕೊಡುಗೆಯೊಂದಿಗೆ ಒಂದು ಚಿತ್ರ ನಿರ್ಮಾಣವಾಗುತ್ತದೆ. ಸೆಟ್ನಲ್ಲಿ ಏನಾಗುತ್ತದೆ ಎಂಬುವುದನ್ನು ಅರ್ಥ ಮಾಡಿಕೊಳ್ಳಲು ಆಳವಾಗಿ ಹೋಗಬೇಕಿದೆ ಎಂದು ನಿರ್ಮಾಪಕ ಅನುರಾಗ್ ಕಶ್ಯಪ್ ತಿಳಿಸಿದ್ದಾರೆ.