ಮುಂಬೈ: ನಟಿ ಅಂಕಿತಾ ಲೋಖಾಂಡೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗೆಳೆಯ ವಿಕ್ಕಿ ಜೈನ್ ಬಗ್ಗೆ ಸುಂದರವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ. ಪದಗಳ ಮೂಲಕ ತಮ್ಮ ಹೃದಯಾಂತರಾಳದ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.
‘ನನ್ನ ಭಾವನೆಗಳನ್ನು ವಿವರಿಸಲು ಪದಗಳು ಸಿಗುತ್ತಿಲ್ಲ’ - ಅಂಕಿತಾ ಲೋಖಾಂಡೆ ಹೀಗೆ ಹೇಳಿದ್ದು ಯಾರಿಗೆ.? - ನಟಿ ಅಂಕಿತಾ ಲೋಖಂಡೆ ಗೆಳೆಯ ವಿಕ್ಕಿ ಜೈನ್
’’ನನಗಾಗಿ ಯಾವಾಗಲೂ ಇರುವ ವ್ಯಕ್ತಿಯಾಗಿದ್ದಕ್ಕಾಗಿ ಧನ್ಯವಾದಗಳು. ನನ್ನ ಎಲ್ಲ ಸಮಸ್ಯೆಗಳನ್ನು ನಿಮ್ಮದಾಗಿಸಿಕೊಂಡಿದ್ದಕ್ಕಾಗಿ ಮತ್ತು ಅಗತ್ಯ ಇರುವಾಗ ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು’’.

ನಿಮಗಾಗಿ ನನ್ನ ಭಾವನೆಗಳನ್ನು ವಿವರಿಸಲು ನನಗೆ ಪದಗಳು ಸಿಗುತ್ತಿಲ್ಲ. ನನ್ನ ಜೀವನದಲ್ಲಿ ನಿಮ್ಮನ್ನು ಸ್ನೇಹಿತನಾಗಿ, ಪಾಲುದಾರನಾಗಿ ಮತ್ತು ಆತ್ಮ ಸಂಗಾತಿಯಾಗಿ ಕಳುಹಿಸಿದ್ದಕ್ಕಾಗಿ ನಾನು ದೇವರಿಗೆ ಕೃತಜ್ಞಳಾಗಿದ್ದೇನೆ. ನನಗಾಗಿ ಯಾವಾಗಲೂ ಇರುವ ವ್ಯಕ್ತಿಯಾಗಿದ್ದಕ್ಕಾಗಿ ಧನ್ಯವಾದಗಳು. ನನ್ನ ಎಲ್ಲ ಸಮಸ್ಯೆಗಳನ್ನು ನಿಮ್ಮದಾಗಿಸಿಕೊಂಡಿದ್ದಕ್ಕಾಗಿ ಮತ್ತು ಅಗತ್ಯ ಇರುವಾಗ ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಮುಖ್ಯವಾಗಿ, ನನ್ನನ್ನು ಮತ್ತು ನನ್ನ ಸಂದರ್ಭಗಳನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ತಮ್ಮ ಹೃದಯಾಂತರಾಳದ ಮಾತುಗಳನ್ನ ಆಡಿದ್ದಾರೆ ಅಂಕಿತಾ.
ನನ್ನಿಂದಾಗಿ ನೀವು ಅನೇಕ ಟೀಕೆಗಳಿಗೆ ಗುರಿಯಾಗ ಬೇಕಾಯಿತು. ಅದಕ್ಕಾಗಿ ನಾನು ನಿಮಗೆ ಕ್ಷಮೆಯಾಚಿಸುತ್ತೇನೆ. ಈ ಬಂಧವು ಅದ್ಭುತವಾಗಿದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ.