ಬಾಲಿವುಡ್ ಸ್ಟಾರ್ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಮಗ ತೈಮೂರ್ ಇನ್ನೂ ಎರಡು ವರ್ಷ ತುಂಬದ ಹಸುಗೂಸು. ಹುಟ್ಟಿದ ಕ್ಷಣದಿಂದಲೂ ಅವನೊಬ್ಬ ಸೆಲೆಬ್ರಿಟಿ. ಕರೀನಾ ಹಾಗೂ ಸೈಫ್ ದಂಪತಿ ತಮ್ಮ ಮಗ ತೈಮೂರ್ನನ್ನು ಅದೆಷ್ಟು ಮುದ್ದು ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತೆ ಇದೆ. ಮತ್ತೊಂದು ಘಟನೆ ಆ ಮಾತನ್ನು ಇದೀಗ ಮತ್ತೇ ಮರುಕಳಿಸುವಂತೆ ಮಾಡಿತು.
ಹೌದು, ಈ ದಂಪತಿಗೆ ತೈಮೂರ್ ಖಾನ್ ಅಂದರೆ ಎಲ್ಲಿಲ್ಲದ ಪ್ರೀತಿ. ಸ್ವಲ್ಪ ಅಳು ಮುಖ ಮಾಡಿದರೂ ತಡೆದುಕೊಳ್ಳದ ಸೈಫ್ ದಂಪತಿ, ಅವನ ಇಷ್ಟ-ಕಷ್ಟಗಳನ್ನು ಈಡೇರಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ವಿಮಾನ ನಿಲ್ದಾಣವೊಂದರಲ್ಲಿ ಕೆಲ ಪತ್ರಕರ್ತರು ಅವರ ಫ್ಯಾಮಿಲಿ ಫೋಟೋ ಕ್ಲಿಕ್ಕಿಸಲು ಹೋದಾಗ ಸೈಫ್ ದಂಪತಿ ಇವರನ್ನು ತಡೆದಿದ್ದಾರೆ. ಈ ವೇಳೆ ಸ್ವಲ್ಪ ಗರಂ ಆದ ಸೈಫ್ ದಂಪತಿ, ನಿಮ್ಮ ಕಣ್ಣು ಕುಕ್ಕುವ ಫೋಟೋಗಳನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸೈಫ್ ಅಲಿ ಖಾನ್ ಕಾರಣವನ್ನೂ ಕೊಟ್ಟಿದ್ದಾರೆ.