ಬಾಲಿವುಡ್ ನಟಿ ಅನನ್ಯಾ ಪಾಂಡೆ ಶಕುನ್ ಬಾತ್ರಾ ಅವರ ಗೆಹ್ರೈಯಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ನ ಬಹುಬೇಡಿಕೆಯ ನಟಿಯಾದ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಮತ್ತು ಧೈರ್ಯ ಕರ್ವ ಅವರ ಜೊತೆ ಅನನ್ಯಾ ತೆರೆ ಹಂಚಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅನನ್ಯಾ ಪಾಂಡೆ, ತಾವು ಈ ಸಿನಿಮಾದಲ್ಲಿ ನಟಿಸಿದ್ದು ವೈಯಕ್ತಿಕ ಮತ್ತು ನಟನಾ ಕೌಶಲ್ಯ ಸುಧಾರಣೆಗೆ ಸಹಾಯವಾಯಿತು ಎಂದು ಹೇಳಿಕೊಂಡಿದ್ದಾರೆ.
ಬಾಲಿವುಡ್ನಲ್ಲಿ ದೀಪಿಕಾ ಪಡುಕೋಣೆ ದೊಡ್ಡ ನಟಿ, ಸಿದ್ಧಾಂತ್ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಇವರ ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ ನೀಡಿದೆ. ನಾನು ಹೊಸಬಳು ಎಂಬ ಭಾವನೆ ನನಗೆ ಎಂದೂ ಮೂಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಗೆಹ್ರೈಯಾನ್ ಸಿನಿಮಾದಲ್ಲಿ ನಿಮ್ಮ ಪಾತ್ರ ಏನು ಎಂಬ ಪ್ರಶ್ನೆಗೆ, ಸಂಕೀರ್ಣ ಆಧುನಿಕ ಸಂಬಂಧಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ. ಇದರಲ್ಲಿ ತಿಯಾ ಪಾತ್ರ ಮಾಡಿದ್ದೇನೆ. ಇದೊಂದು ಸವಾಲಿನ ಪಾತ್ರವಾಗಿತ್ತು. ಮೊದಮೊದಲು ಕಷ್ಟ ಎನಿಸಿದರೂ ಕ್ರಮೇಣ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ ನಟಿಸಿದ್ದೇನೆ. ಭಯ ಬಿಟ್ಟು ನಟಿಸಬೇಕು ಎಂದು ನಿರ್ಧರಿಸಿ, ನನ್ನಲ್ಲಿನ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಅನನ್ಯಾ ಪಾಂಡೆ ಹೇಳಿದರು.
ಗೆಹ್ರೈಯಾನ್‌ನಲ್ಲಿ ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಧರ್ಮಾ ಪ್ರೊಡಕ್ಷನ್ಸ್, ವಯಾಕಾಮ್ 18 ಮತ್ತು ಶಕುನ್ ಬಾತ್ರಾ ಅವರ ಜೌಸ್ಕಾ ಫಿಲ್ಮ್ ಬ್ಯಾನರ್ನಡಿ ಜಂಟಿಯಾಗಿ ನಿರ್ಮಿಸಲಾಗಿದ್ದು, ಫೆಬ್ರವರಿ 11, 2022 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಕಾಣಲಿದೆ.
ಇದನ್ನೂ ಓದಿ:ನಾಗಚೈತನ್ಯ ತುಂಬಾ ತಾಳ್ಮೆ ಇರುವ ವ್ಯಕ್ತಿ: ನಟಿ ದಕ್ಷಾ ನಗರ್ಕರ್ ಹೊಗಳಿಕೆ