ಕರ್ನಾಟಕ

karnataka

ETV Bharat / sitara

ತಮ್ಮ ಮುಂಬರುವ ಚಿತ್ರಗಳ ಸೆಟ್​ನಿಂದ ಫೋಟೋ ಹಂಚಿಕೊಂಡ ಅನನ್ಯಾ ಪಾಂಡೆ - ಫೊಟೋ ಹಂಚಿಕೊಂಡ ಅನನ್ಯಾ ಪಾಂಡೆ

ತಮ್ಮ ಮುಂಬರುವ ಚಿತ್ರಗಳಾದ ಲೈಗರ್ ಹಾಗೂ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಸೆಟ್​ನಿಂದ ಬಾಲಿವುಡ್ ನಟಿ ಅನನ್ಯಾ ಪಾಂಡೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Ananya
Ananya

By

Published : Apr 26, 2021, 9:35 PM IST

ಹೈದರಾಬಾದ್:ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರು ಮುಂಬರುವ ಎರಡು ಚಿತ್ರಗಳ ಚಿತ್ರೀಕರಣವನ್ನು ಕುಶಲತೆಯಿಂದ ನಿರ್ವಹಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ ಲೈಗರ್ ಚಿತ್ರ ಮತ್ತು ದೀಪಿಕಾ ಪಡುಕೋಣೆ ಹಾಗೂ ಸಿದ್ಧಾಂತ್ ಚತುರ್ವೇದಿ ಅವರೊಂದಿಗಿನ ಶಕುನ್ ಬಾತ್ರಾ ಅವರ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್​ನಲ್ಲಿ ತೊಡಗಿದ್ದಾರೆ.

ಬಹು ನಿರೀಕ್ಷಿತ ಈ ಎರಡೂ ಹಿಂದಿ ಚಿತ್ರಗಳ ಸೆಟ್​ನಿಂದ ಅನನ್ಯಾ ಕೆಲವು ಆಸಕ್ತಿದಾಯಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಲೈಗರ್ ಚಿತ್ರದಲ್ಲಿ ಅನನ್ಯಾ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸಲಿದ್ದಾರೆ.

ಶಕುನ್ ಬಾತ್ರಾ ಅವರ ಚಿತ್ರದಲ್ಲಿ ಅನನ್ಯಾ, ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಲೈಗರ್ ಮತ್ತು ಶಕುನ್ ಅವರ ಚಿತ್ರದ ಶೂಟಿಂಗ್ ವೇಳಾಪಟ್ಟಿ ಕೋವಿಡ್-19 ಅಡ್ಡಿಯಾಗುತ್ತಿದೆ.

ABOUT THE AUTHOR

...view details