ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ಡಬಲ್ ಖುಷಿಯಲ್ಲಿದ್ದಾರೆ. ಒಂದು ಕಡೆ ಮದುವೆ ಸಂಭ್ರಮ. ಮತ್ತೊಂದೆಡೆ ತಾಯಿ ಆಗುತ್ತಿರುವ ಸಂತೋಷ.
ಹೌದು, ಬ್ರಿಟಿನ್ ಬ್ಯೂಟಿ ಆ್ಯಮಿ ಮದುವೆ ಮುಂಚೇ ಅಮ್ಮ ಆಗುತ್ತಿದ್ದಾರೆ. ಈ ವಿಚಾರವನ್ನು ಅವರೇ ಎಲ್ಲರೆದರು ಖುಲ್ಲಂ ಖುಲ್ಲಾ ಹೇಳಿಕೊಂಡಿದ್ದಾರೆ. ಇದರಲ್ಲಿ ಬಚ್ಚಿಡುವುದೇನಿದೆ ಹೇಳಿ? ಎಲ್ಲರೂ ಮದುವೆ ಬಳಿಕ ಮಗು ಪಡೆಯುತ್ತಾರೆ. ಆದರೆ, ನಾವು ಮದುವೆ ಮುಂಚೇ ಪಡೆಯುತ್ತಿದ್ದೇವೆ ಅಷ್ಟೇ ಎಂದಿದ್ದಾರೆ.
ಆ್ಯಮಿ ಕಳೆದ ವರ್ಷ ತಮ್ಮ ಬಾಯ್ಫ್ರೆಂಡ್ ಜಾರ್ಜ್ ಪಾನಾಯ್ಟೊವ್ ಜತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡು, ನಾನು ಆಲ್ ರೆಡಿ ಎಂಗೇಜ್ ಅಂತಾ ಇನ್ಡೈರೆಕ್ಟ್ ಆಗಿ ಹೇಳಿಕೊಂಡಿದ್ದರು. ಕೆಲವೊಂದು ಪ್ರೈವೇಟ್ ಪಾರ್ಟಿ, ಪಬ್ಗಳಲ್ಲಿ ಕಾಣಿಸಿಕೊಂಡು ತಮ್ಮ ರಿಲೇಷನ್ಶಿಪ್ ಹಚ್ಚು ಹಸಿರಾಗಿಸಿಕೊಂಡಿದ್ದರು. ಕಳೆದ ತಿಂಗಳು ಇನ್ಸ್ಟಾಗ್ರಾಂನಲ್ಲಿ ತಮ್ಮ ಪ್ರಗ್ನೆನ್ಸಿ ರಿವೀಲ್ ಮಾಡಿದ್ದ ಈಕೆ, ಜಾರ್ಜ್ ಜತೆಗಿನ ಪ್ರೀತಿಯ ಗುಟ್ಟು ರಟ್ಟು ಮಾಡಿದ್ರು.
ಇದೇ ಮೇ 5 ಕ್ಕೆ ಲಂಡನ್ನಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ಎಂಗೇಜ್ಮೆಂಟ್ ಮಾಡಿಕೊಳ್ಳಲಿದೆ. ಈಗ ಫಿಯಾನ್ಸೆ ಜತೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದಿರುವ ಈ ಚೆಲುವೆ, ಪ್ರಗ್ನೆಸಿ ದಿನಗಳನ್ನು ಸಂಭ್ರಮಿಸುತ್ತಿದ್ದಾರೆ. ಸದ್ಯ ದುಬೈನಲ್ಲಿರುವ ಆ್ಯಮಿ, ತಮ್ಮ ಬೇಬಿ ಬಂಪ್ನ ಫೋಟೋ ಹಂಚಿಕೊಂಡಿದ್ದಾರೆ.
ಇನ್ನು ಆ್ಯಮಿ ಜಾಕ್ಸನ್ ಬಾಲಿವುಡ್ ಸೇರಿದಂತೆ ಸೌಥ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಕನ್ನಡದ ದಿ ವಿಲನ್ ಚಿತ್ರಕ್ಕೂ ಆ್ಯಮಿ ನಾಯಕಿಯಾಗಿದ್ದರು.