ಬಾಲಿವುಡ್ ನಟಿ ಅಮೃತಾ ರಾವ್ ತನ್ನ ಒಡೆತನದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಬಾಡಿಗೆದಾರಿಂದ ಬಾಡಿಗೆ ಹಣವನ್ನು ಪಡೆಯುವುದನ್ನು ಕೆಲವು ತಿಂಗಳ ಕಾಲ ಮುಂದೂಡಿದ್ದಾರಂತೆ. ಅಮೃತಾ ರಾವ್ ಮುಂಬೈನ ಅನೇಕ ಕಡೆ ಅಪಾರ್ಟ್ಮೆಂಟ್ ಸೇರಿ ಇತರ ಆಸ್ತಿಗಳನ್ನು ಹೊಂದಿದ್ದಾರೆ.
ಬಾಡಿಗೆದಾರರಿಂದ ಬಲವಂತವಾಗಿ ಬಾಡಿಗೆ ಕೇಳುವುದಿಲ್ಲ...ಬಾಲಿವುಡ್ ನಟಿ - ಮುಂಬೈನಲ್ಲಿ ಆಸ್ತಿ ಹೊಂದಿರುವ ಅಮೃತಾ ರಾವ್
ಕೊರೊನಾದಿಂದ ಜನರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು ನನ್ನ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಂದ ನಾನು ಕೆಲವು ತಿಂಗಳ ಕಾಲ ಬಾಡಿಗೆ ಕೇಳದಿರಲು ನಿರ್ಧರಿಸಿದ್ಧೇನೆ ಎಂದು ಬಾಲಿವುಡ್ ನಟಿ ಅಮೃತಾ ರಾವ್ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಮೃತಾ, ನನ್ನ ಅಪಾರ್ಟ್ಮೆಂಟ್ನಲ್ಲಿರುವ ಬಹಳಷ್ಟು ಬಾಡಿಗೆದಾರರು ಸಿನಿಮಾದಲ್ಲಿ ಪ್ರತಿದಿನದ ಕೂಲಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಅವರಿಗೆ ಇತರರಂತೆ ತಿಂಗಳ ಸಂಬಳ ದೊರೆಯುವುದಿಲ್ಲ. ಈ ಕೊರೊನಾ ವೈರಸ್ ಎಲ್ಲರ ಜೀವನವನ್ನು ಅತಂತ್ರ ಮಾಡಿದೆ. ಈ ಭೀಕರ ಪರಿಸ್ಥಿತಿಯಿಂದ ಎಲ್ಲರೂ ತಮ್ಮ ಕುಟುಂಬಗಳೊಂದಿಗೆ ಊರಿಗೆ ಹೊರಡುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಕೊರೊನಾದಿಂದ ಯಾವುದೇ ತೊಂದರೆಗೆ ಒಳಗಾಗದಿರುವವರು, ಪ್ರತಿ ತಿಂಗಳು ತಪ್ಪದೆ ಸಂಬಳ ಪಡೆಯುತ್ತಿರುವವರು ಮನೆ ಮಾಲೀಕರಿಗೆ ಬಾಡಿಗೆ ನೀಡದೆ ಸತಾಯಿಸಬೇಡಿ. ಲಾಕ್ಡೌನ್ ನೆಪವಾಗಿರಿಸಿಕೊಂಡು ಕೆಲವರು ಬಾಡಿಗೆ ಕಟ್ಟದೆ ತಪ್ಪಿಸಿಕೊಳ್ಳುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಕೂಡಾ ಅಮೃತಾ ಸಿಂಗ್ ಹೇಳಿಕೊಂಡಿದ್ದಾರೆ.