ಮುಂಬೈ:ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಹಾಗೂ ಮೊಮ್ಮಗಳು ಆರಾಧ್ಯ ಬಚ್ಚನ್ರಲ್ಲಿ ಕೊರೊನಾ ಸೋಂಕು ದೃಢವಾದ ಹಿನ್ನೆಲೆ, ಬಚ್ಚನ್ ಅವರ ವಿಲೇ ಪಾರ್ಲೆ-ಜುಹುವಿನಲ್ಲಿರುವ ಬಂಗಲೆಗೆ ಅಧಿಕಾರಿಗಳು ಧಾವಿಸಿ ಏರಿಯಾವನ್ನು ಸೀಲ್ಡೌನ್ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಬಂಗಲೆಗಳ ಸುತ್ತಮುತ್ತ ಸ್ಯಾನಿಟೈಸ್ - ಅಮಿತಾಬ್ ಬಚ್ಚನ್
ಬಚ್ಚನ್ ಕುಟುಂಬದ ನಾಲ್ವರಲ್ಲಿ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆ ಅವರ ಜಲ್ಸಾ ಹಾಗೂ ಜನಕ್ ಬಂಗಲೆಯ ಸುತ್ತಮುತ್ತ ಅಧಿಕಾರಿಗಳು ಸಾನಿಟೈಸ್ ಮಾಡಿದ್ದಾರೆ.
ಅಮಿತಾಬ್ ಬಚ್ಚನ್ ಬಂಗಲೆಗಳ ಸುತ್ತಮುತ್ತ ಸ್ಯಾನಿಟೈಸ್
ಅಲ್ಲದೇ ಪ್ರತೀಕ್ಷಾ ಹಾಗೂ ಜನಕ್ ಬಂಗಲೆಯ ಸುತ್ತಮುತ್ತ ಅಧಿಕಾರಿಗಳು ಸ್ಯಾನಿಟೈಸ್ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಅವರ ಮನೆ ಭಾಗವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ತಂಡವು ಬಚ್ಚನ್ ಅವರ ಜಲ್ಸಾ ಬಂಗಲೆಗೆ ಇಂದು ಬೆಳಗ್ಗೆಯೇ ಆಗಮಿಸಿ ಸ್ಯಾನಿಟೈಸ್ ಕೆಲಸವನ್ನು ಆರಂಭಿಸಿತ್ತು.
ಕೊರೊನಾ ಸೋಂಕಿಗೆ ಒಳಗಾಗಿರುವ ಬಚ್ಚನ್ ಕುಟುಂಬದ ನಾಲ್ಕೂ ಜನ ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated : Jul 12, 2020, 8:38 PM IST