ಇದೇ 14 ರಂದು ಲಂಡನ್ನಲ್ಲಿ ನಡೆದ 50 ಓವರ್ಗಳ ಹಾಗೂ ನಂತರದ ಸೂಪರ್ ಓವರ್ ಪಂದ್ಯ ಟೈ ಆಗಿತ್ತು. ಈ ವೇಳೆ 'ಬೌಂಡರಿ ಕೌಂಟ್' ನಿಯಮದ ಅಡಿ ಅತೀ ಹೆಚ್ಚು ಬೌಂಡರಿ ಬಾರಿಸಿದ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ಚಾಂಪಿಯನ್ ಪಟ್ಟ ಒಲಿಯಿತು. ಆಂಗ್ಲರ್ ವಿರುದ್ಧ ಪ್ರಬಲ ಸ್ಪರ್ಧೆಯೊಡ್ಡಿದ ನ್ಯೂಜಿಲ್ಯಾಂಡ್ ತಾನು ಮಾಡದ ತಪ್ಪಿಗೆ ಚೊಚ್ಚಲ ವಿಶ್ವಕಪ್ನಿಂದ ವಂಚಿತವಾಯಿತು.
ಅದೃಷ್ಟದ ವಿಶ್ವಕಪ್ ಗೆಲುವು: ದೃಷ್ಟಾಂತ ಮೂಲಕ ಐಸಿಸಿ ನಿಯಮ ಟೀಕಿಸಿದ 'ಬಿಗ್ ಬಿ' - ಬೌಂಡರಿ ಕೌಂಟ್
ಇಂಗ್ಲೆಂಡ್ ತಂಡದ ವಿಶ್ವಕಪ್ ಗೆಲುವಿಗೆ ಕಾರಣವಾದ 'ಬೌಂಡರಿ ಕೌಂಟ್' ನಿಯಮದ ವಿರುದ್ಧ ಪರ-ವಿರೋಧ ಚರ್ಚೆ ಶುರುವಾಗಿದೆ. ಸದ್ಯ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಐಸಿಸಿಯ ಈ ನಿಯಮವನ್ನು ಟ್ರೋಲ್ ಮಾಡಿದ್ದಾರೆ.
ಸದ್ಯ ಇಂಗ್ಲೆಂಡ್ ತಂಡದ ಈ ಗೆಲುವು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಅವರ ಈ ವಿಜಯ ಎಷ್ಟು ಸರಿ ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದೀಗ ಬಾಲಿವುಡ್ ಬಿಗ್ ಬಿ ಕೂಡ ಐಸಿಸಿ ನಡೆ ಪ್ರಶ್ನಿಸಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಅವರು, ಒಂದು ಉಲ್ಲಾಸಭರಿತ ದೃಷ್ಟಾಂತದ ಮೂಲಕ ಐಸಿಸಿ ನಿಯಮಕ್ಕೆ ಅಣಕವಾಡಿದ್ದಾರೆ. 'ನನ್ನ ಹಾಗೂ ನಿಮ್ಮ ಬಳಿ ತಲಾ ₹ 2000 ಇದೆ. ನಮ್ಮಿಬ್ಬರಲ್ಲಿ ಶ್ರೀಮಂತ ಯಾರು? ಎಂದು ಪ್ರಶ್ನಿಸಿ, ನಿಮ್ಮ ಬಳಿ ₹ 500 ಮೌಲ್ಯದ 4 ನೋಟು, ನನ್ನ ಬಳಿ ₹ 2000 ಮೌಲ್ಯದ 1 ನೋಟಿದೆ. ಐಸಿಸಿ ನಿಮಯದ ಪ್ರಕಾರ ನೀವೇ ಶ್ರೀಮಂತ ಎಂದಾಯಿತಲ್ಲವೇ ಎಂದು ಬಿಗ್ಬಿ ಕಾಲೆಳೆದಿದ್ದಾರೆ.