ಕರ್ನಾಟಕ

karnataka

ETV Bharat / sitara

ಕೊರೊನಾ ಲಸಿಕೆ ಹಾಕಿಸಿಕೊಂಡ ಬಿಗ್​ ಬಿ ಅಮಿತಾಬ್​ ಬಚ್ಚನ್​ ಮತ್ತು ಕುಟುಂಬ

ನಟ ಅಭಿಷೇಕ್​​ ಬಚ್ಚನ್ ಹೊರತಾಗಿ ಬಿಗ್​ ಬಿ ಅಮಿತಾಬ್​ ಬಚ್ಚನ್​​ ಕುಟುಂಬದ ಎಲ್ಲರೂ ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

Amitabh Bachchan receives COVID-19 vaccine
ಅಮಿತಾಬ್​ ಬಚ್ಚನ್

By

Published : Apr 2, 2021, 12:37 PM IST

ಮುಂಬೈ:ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​ ಕೋವಿಡ್​ ಲಸಿಕೆಯ ಮೊದಲ ಡೋಸ್​ ಅನ್ನು ಪಡೆದಿದ್ದಾರೆ. ಮಗ ನಟ ಅಭಿಷೇಕ್​​ ಬಚ್ಚನ್​ ಹೊರತು ಪಡಿಸಿ ಕುಟುಂಬದ ಎಲ್ಲ ಸದಸ್ಯರು ವ್ಯಾಕ್ಸಿನ್​ ಹಾಕಿಸಿಕೊಂಡಿರುವುದಾಗಿ ಬಚ್ಚನ್​ ತಿಳಿಸಿದ್ದಾರೆ.

ತಮ್ಮ ಅಧಿಕೃತ ಬ್ಲಾಗ್​ನಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ಬಿಗ್​ ಬಿ, ನಿನ್ನೆ ನಮ್ಮ ಕುಟುಂಬದ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, ಇಂದು ಎಲ್ಲರ ವರದಿ ನೆಗೆಟಿವ್​ ಬಂದಿದೆ. ಅಭಿಷೇಕ್​​ ಬಚ್ಚನ್ ಹೊರತಾಗಿ ಎಲ್ಲರೂ ಲಸಿಕೆಯ ಮೊದಲ ಡೋಸ್​ ಪಡೆದಿದ್ದೇವೆ. ಅಭಿಷೇಕ್​ ಚಿತ್ರೀಕರಣದಲ್ಲಿ ತೊಡಗಿದ್ದು, ಹಿಂದಿರುಗಿ ಬರುತ್ತಿದ್ದಂತೆಯೇ ವ್ಯಾಕ್ಸಿನ್​ ಪಡೆಯಲಿದ್ದಾರೆ ಎಂದು ಬರೆದು ಕೊಂಡಿದ್ದಾರೆ.

ಇದನ್ನೂ ಓದಿ:ಸಚಿನ್​ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು.. 10 ವರ್ಷದ ಹಿಂದಿನ ಸಂಭ್ರಮ ಮೆಲುಕು!

ಲಸಿಕೆ ಪ್ರಕ್ರಿಯೆ ಐತಿಹಾಸಿಕವಾದದ್ದು. ವ್ಯಾಕ್ಸಿನೇಷನ್ ತೆಗೆದುಕೊಳ್ಳುವ ಸಂಪೂರ್ಣ ಕಾರ್ಯವಿಧಾನದ ವಿವರಗಳಿಗಾಗಿ ವಿಶೇಷ ಬ್ಲಾಗ್​ನ ಅಗತ್ಯವಿದೆ ಎಂದು ಬಚ್ಚನ್ ಹೇಳಿದ್ದಾರೆ.

2020ರ ಜುಲೈನಲ್ಲಿ ಅಮಿತಾಬ್​ ಬಚ್ಚನ್, ಮಗ ಅಭಿಷೇಕ್​​ ಬಚ್ಚನ್​, ಸೊಸೆ ಐಶ್ವರ್ಯಾ ರೈ, ಮೊಮ್ಮಗಳು ಆರಾಧ್ಯಾ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದರು.

ABOUT THE AUTHOR

...view details