ಮುಂಬೈ (ಮಹಾರಾಷ್ಟ್ರ):ಹಿಂದಿಯ 'ಕೌನ್ ಬನೇಗಾ ಕರೋಡ್ಪತಿ' (ಕೆಬಿಸಿ) ಶೋ ಇತ್ತೀಚೆಗೆ 1000 ಸಂಚಿಕೆಗಳನ್ನು ಪೂರ್ಣಗೊಳಿಸಿದ್ದು, ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಬಂದಿರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.
2000ರ ಜುಲೈ 3ರಿಂದ ಖಾಸಗಿ ವಾಹಿನಿಯಲ್ಲಿ ಕೆಬಿಸಿ ಆರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೂ, ಅಂದರೆ 21 ವರ್ಷಗಳಿಂದ ಬಿಗ್ ಬಿ ಅಮಿತಾಭ್ ಬಚ್ಚನ್ ಶೋ ನಡೆಸಿಕೊಂಡು ಬಂದಿದ್ದಾರೆ. 1000 ಸಂಚಿಕೆಗಳನ್ನು ಪೂರೈಸಿದ ಐತಿಹಾಸಿಕ ಸಾಧನೆಯನ್ನು ಆಚರಿಸಲು, ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ನಂದಾ ಮತ್ತು ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರನ್ನು ಅತಿಥಿಗಳಾಗಿ ಕರೆಯಲಾಗಿತ್ತು. ಇವರಿಬ್ಬರು ಹಾಟ್ ಸೀಟ್ನಲ್ಲಿ ಕುಳಿತಿದ್ದು, ಈ ಕೌಟುಂಬಿಕ ಸಂಚಿಕೆಯನ್ನು ಅಮಿತಾಬ್ ಪತ್ನಿ ಜಯಾ ಬಚ್ಚನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೇರಿಕೊಂಡರು.