ಕರ್ನಾಟಕ

karnataka

ETV Bharat / sitara

ಪುಲ್ವಾಮಾ ಹುತಾತ್ಮರಿಗಾಗಿ ಹಾಡು... ಯೋಧರಿಗಾಗಿ ಹಾಡಿದ ಅಮಿತಾಭ್​, ಆಮೀರ್​, ರಣ್​ಬೀರ್ - undefined

ನಟ ಅಮಿತಾಭ್​, ಆಮೀರ್ ಖಾನ್​ ಹಾಗೂ ರಣ್​ಬೀರ್ ಕಪೂರ್​​ ದೇಶಭಕ್ತಿಗೆ ಗೀತೆಗೆ ಧ್ವನಿಯಾಗಿದ್ದಾರೆ. ಇದನ್ನು ಪುಲ್ವಾಮಾ ದಾಳಿಯಲ್ಲಿ ಮಡಿದ ಯೋಧರಿಗೆ ಅರ್ಪಿಸಿದ್ದಾರೆ.

ಚಿತ್ರಕೃಪೆ: CRPF ಟ್ವಿಟ್ಟರ್​​

By

Published : Apr 19, 2019, 9:31 PM IST

ಈ ವರ್ಷದ ಫೆ.14 ಭಾರತದ ಪಾಲಿಗೆ ಕರಾಳ ದಿನ. ಅಂದು ಉಗ್ರರ ದಾಳಿಗೆ ಜಮ್ಮು ಕಾಶ್ಮಿರದ ಪುಲ್ವಾಮಾದಲ್ಲಿ 44 ಯೋಧರು ಮಡಿದರು. ಭಾರತೀಯ ಸೈನಿಕರ ಮೇಲೆ ನಡೆದ ಘನಘೋರ ದುರಂತ ಮರೆಯಲು ಸಾಧ್ಯವಿಲ್ಲ.

ಈಗಲೂ ಆ ಕರಾಳ ದಿನ ನೆನಪಿಸಿಕೊಂಡ್ರೆ ದೇಶದ ಜನರ ಆಕ್ರೋಶ ಉಕ್ಕುತ್ತದೆ. ವೀರಮರಣ ಹೊಂದಿದ ಭಾರತ ಮಾತೆಯ ಪುತ್ರರಿಗೆ ಕಂಬನಿಧಾರೆ ಹರಿಯುತ್ತದೆ. ಇದೀಗ ಅಂದು ಉಗ್ರರ ಸಂಚಿಗೆ ಬಲಿಯಾದ ಸೈನಿಕರಿಗೆ ಬಾಲಿವುಡ್ ಮಂದಿ ವಿಶೇಷ ನಮನ ಸಲ್ಲಿಸಿದ್ದಾರೆ.

ಬಾಲಿವುಡ್​ ಮೇರು ನಟರಾದ ಅಮಿತಾಭ್​ ಬಚ್ಚನ್​, ಆಮೀರ್​ ಖಾನ್​ ಹಾಗೂ ರಣ್​ಬೀರ್ ಕಪೂರ್​​ ಸೈನಿಕರ ಕುರಿತು 'ಥು ದೇಶ ಮೇರಾ'ಸಾಂಗ್​ವೊಂದನ್ನು ಹಾಡಿದ್ದಾರೆ. ಈ ದೇಶಭಕ್ತಿ ಗೀತೆಯನ್ನು ಪುಲ್ವಾಮಾ ಅಟ್ಯಾಕ್​ನಲ್ಲಿ ಮಡಿದ ಯೋಧರಿಗೆ ಅರ್ಪಿಸಿ ಗೌರವ ಸಲ್ಲಿಸಿದ್ದಾರೆ. ಇವರ ಈ ಪ್ರಯತ್ನಕ್ಕೆ CRPF ಧನ್ಯವಾದ ತಿಳಿಸಿದೆ.

For All Latest Updates

TAGGED:

ABOUT THE AUTHOR

...view details