ಮುಂಬೈ: ಪ್ರಿಯಾಂಕ ಚೋಪ್ರಾ ಆತ್ಮ ಚರಿತ್ರೆ ಸಿದ್ಧವಾಗಿದೆ. ಅಮೆರಿಕದಲ್ಲಿರುವ ಪಿಗ್ಗಿ ಈ ವಿಷಯವನ್ನ ಸೋಮವಾರ ತಡರಾತ್ರಿ ಖಚಿತಪಡಿಸಿದ್ದಾರೆ.
ಓದುಗರಿಗೆ ಪ್ರಿಯಾಂಕ ಆತ್ಮಚರಿತ್ರೆ ಸಿದ್ಧ: ಫುಲ್ ಖುಷಿಯಾದ ಮಾಜಿ ವಿಶ್ವ ಸುಂದರಿ - ಪ್ರಿಯಾಂಕ ಚೋಪ್ರಾ ಇತ್ತೀಚಿನ ಸುದ್ದಿ
ಬಾಲಿವುಡ್ ಚೆಂದುಳ್ಳಿ ಚೆಲುವೆ ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಚೋಪ್ರಾ ಬದುಕಿನ ಪುಟಗಳನ್ನು ಅನಾವರಣಗೊಳಿಸುವ ಆತ್ಮ ಚರಿತ್ರೆ ಸಿದ್ದವಾಗಿದೆಯಂತೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು ಮೊದಲ ಬಾರಿಗೆ ತಮ್ಮ ಬಗ್ಗೆ ಪತ್ರಿಕೆಯಲ್ಲಿ ಮುದ್ರಣಗೊಂಡಿರುವುದನ್ನ ನೋಡಿದರೆ ಅದ್ಭುತ ಭಾವನೆ ಬರುತ್ತಿದೆ. ಆದರೆ ಅದು ಇನ್ನೂ ಪೂರ್ಣಗೊಂಡಿಲ್ಲ. ಶೀಘ್ರದಲ್ಲೆ ನಿಮ್ಮ ಮುಂದೆ ಬರಲಿದೆ ಎಂದು ಬರೆದುಕೊಂಡಿದ್ದಾರೆ. ಈ ಹಿಂದಿನ ತಮ್ಮ 38 ವರ್ಷಗಳ ಜೀವನ ಹಾಗೂ ಬದುಕಿನ ಪ್ರತಿಯೊಂದು ಅಂಶವೂ ಆತ್ಮಚರಿತ್ರೆಯಲ್ಲಿ ಅಡಕವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದೊಂದು ನನ್ನ ಬದುಕಿನ ಆತ್ಮವಲೋಕನ ಹಾಗೂ ಪ್ರತಿಬಿಂಬವನ್ನ ತೋರಿಸಲಿದೆ ಎಂದು ಬಣ್ಣನೆ ಮಾಡಿಕೊಂಡಿದ್ದಾರೆ. ಪ್ರಿಯಾಂಕ ಚೋಪ್ರಾ ಆತ್ಮಚರಿತ್ರೆ ಒಂದು ರೀತಿಯಲ್ಲಿ ಪೂರ್ಣಗೊಂಡು ಅಪೂರ್ಣವಾಗಿದೆ. ಅದೀಗ ಅಂತಿಮ ಹಸ್ತಪ್ರತಿಗಾಗಿ ಕಳುಹಿಸಲಾಗಿದೆ. ಆದರೆ ತಮಗೆ ಅಲ್ಲಿಯವರೆಗೂ ಕಾಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. 2018ರಲ್ಲೇ ತಮ್ಮ ಆತ್ಮಚರಿತ್ರೆ ಬಗ್ಗೆ ಪ್ರಿಯಾಂಕ ಘೋಷಿಸಿಕೊಂಡಿದ್ದರು.ಅದೀಗ ಕಾರ್ಯರೂಪಕ್ಕೆ ಬಂದಿದೆ.