ಕರ್ನಾಟಕ

karnataka

ETV Bharat / sitara

ಬಿಗ್​​ಬಾಸ್​​ ಸ್ಪರ್ಧಿ ಅಲಿಗೋನಿ ವಿರುದ್ಧ ನೆಟಿಜನ್ಸ್ ಆಕ್ರೋಶ: ಸಹೋದರಿ ಇಲ್ಹಾಮ್ ಪ್ರತಿಕ್ರಿಯೆ ಏನು....? - Bigg Boss Contestant Aly goni

ಬಿಗ್​​ಬಾಸ್​​​ ಸೀಸನ್​​​ -14 ರಿಂದ ಕಿರುತೆರೆ ನಟಿ ಜಾಸ್ಮಿನ್ ಹೊರಬಂದಿದ್ದಕ್ಕೆ ಅಭಿಮಾನಿಗಳು ನಟ ಅಲಿಯನ್ನು ದೂಷಿಸುತ್ತಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅಲಿ ಸಹೋದರಿ ಅಲ್ಹಾಮ್, ಜಾಸ್ಮಿನ್ ಕೂಡಾ ಅಲಿ ಗೆಲ್ಲಬೇಕೆಂದು ಆಸೆ ಪಡುತ್ತಿದ್ದಾರೆ. ಅಭಿಮಾನಿಗಳು ಮಾತ್ರ ಆತನನ್ನು ದೂಷಿಸುತ್ತಿದ್ದಾರೆ. ಒಂದು ಸ್ಪರ್ಧೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

Bigg Boss Contestant Aly goni
ಬಿಗ್​​ಬಾಸ್​​ ಸ್ಪರ್ಧಿ ಅಲಿಗೋನಿ

By

Published : Jan 21, 2021, 9:59 AM IST

ಮುಂಬೈ: ಬಾಲಿವುಡ್ ನಟ ಸಲ್ಮಾನ್​ ಖಾನ್ ನಡೆಸಿಕೊಡುತ್ತಿರುವ ಬಿಗ್​ಬಾಸ್​​​​​​ ಸೀಸನ್ 14 ಅಂತಿಮ ಹಂತಕ್ಕೆ ತಲುಪಿದೆ. ಸ್ಪರ್ಧಿಗಳು ದೊಡ್ಮನೆಯಲ್ಲಿ 109 ದಿನಗಳನ್ನು ಕಳೆದಿದ್ದು ಇನ್ನೂ 31 ದಿನಗಳನ್ನು ಕಳೆಯಬೇಕಿದೆ. ಈಗಾಗಲೇ ಅನೇಕ ಸ್ಪರ್ಧಿಗಳು ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ. ಆದರೆ ಇತ್ತೀಚೆಗೆ ಜಾಸ್ಮಿನ್ ಭಾಸಿನ್ ಮನೆಯಿಂದ ಹೊರ ಹೋಗಿದ್ದಕ್ಕೆ ನೆಟಿಜನ್ಸ್​​ ಅಲಿ ಗೋನಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲಿ ಗೋನಿ ಸಹೋದರಿ ಇಲ್ಹಾಮ್​​ ಮೊದಲಿನಿಂದಲೂ ಅಲಿಗೋನಿ ಹಾಗೂ ಸ್ನೇಹಿತೆ ಜಾಸ್ಮಿನ್​​​​​​​ಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದರೆ ಜಾಸ್ಮಿನ್ ಕೊನೆಯವರೆಗೂ ಮನೆಯಲ್ಲಿದ್ದು ಈ ಸೀಸನ್ ಗೆಲ್ಲುತ್ತಾರೆ ಎಂದುಕೊಂಡಿದ್ದ ನೆಟಿಜನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಜಾಸ್ಮಿನ್ ಎಲಿಮಿನೇಶನ್ ಆಗಲು ಅಲಿಗೋನಿ ಕಾರಣ ಎಂದು ಆರೋಪಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಇಲ್ಹಾಮ್​, "ಜಾಸ್ಮಿನ್ ಎಲಿಮಿನೇಶನ್ ವಿಚಾರವಾಗಿ ಅಭಿಮಾನಿಗಳು ಅಲಿಯನ್ನು ದೂಷಿಸುತ್ತಿದ್ದಾರೆ. ಜಾಸ್ಮಿನ್ ಎಲಿಮಿನೇಶನ್​​​ನನ್ನು ಅಭಿಮಾನಿಗಳಿಗೆ ಸ್ವೀಕರಿಸಲಾಗುತ್ತಿಲ್ಲ, ಆದ ಕಾರಣ ಅವರು ಕೋಪ ವ್ಯಕ್ತಪಡಿಸುತ್ತಿದ್ದಾರೆ. ಅಲಿ ಬಗ್ಗೆ ಜಾಸ್ಮಿನ್​ಗೆ ಬಹಳ ಚೆನ್ನಾಗಿ ಗೊತ್ತು. ಈಗ ಆಕೆ ಬಿಗ್​​​ಬಾಸ್ ಮನೆಯಿಂದ ಹೊರಬಂದಿದ್ದು, ಅಲಿ ಗೆಲ್ಲಬೇಕೆಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ. ನಾನು ಇಬ್ಬರನ್ನೂ ಸಮಾನವಾಗಿ ಬೆಂಬಲಿಸಿದ್ದೆ. ಎಲ್ಲರೂ ಅಲಿಯನ್ನು ಇಷ್ಟಪಡುತ್ತಾರೆ. ಆದರೆ ಕೆಲವೇ ಮಂದಿ ಮಾತ್ರ ಆತನನ್ನು ದೂಷಿಸುತ್ತಿದ್ದು ಆತನ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಹಬ್ಬಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಇಡ್ಲಿ ಮಾರುವ ವ್ಯಕ್ತಿಗೆ ಅಜಿತ್​​​ ಒಂದು ಲಕ್ಷ ಹಣ ಕೊಟ್ಟಿದ್ಯಾಕೆ ಗೊತ್ತಾ?

ಜಾಸ್ಮಿನ್ ಅಭಿಮಾನಿಗಳ ಈ ಹೇಳಿಕೆಯಿಂದ ಅಲಿ ಇಮೇಜ್​​ಗೆ ಧಕ್ಕೆ ಆಗಲಿದೆಯೇ ಎಂಬ ಪ್ರಶ್ನೆಗೆ, "ಈ ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯನ್ನು ಎಲ್ಲರೂ ಇಷ್ಟಪಡಬೇಕು ಎಂದೇನಿಲ್ಲ. ಅಲಿ ಅಭಿಮಾನಿಗಳಿಗೆ ಆತ ಏನೆಂದು ಗೊತ್ತು. ಯಾರ ಬಗ್ಗೆಯಾದರೂ ನೆಗೆಟಿವ್ ಆಗಿ ಮಾತನಾಡಿದಾಗ ಅವರಿಗೆ ಬೇಸರ ಉಂಟಾಗಬಹುದು, ಆದರೆ ನಂತರ ಅವರು ಮತ್ತಷ್ಟು ಬಲವಾಗುತ್ತಾರೆ. ಅಲಿ ಕೂಡಾ ಬಹಳ ಸ್ಟ್ರಾಂಗ್. ಅಲಿಗೆ ನಾನು ಹಾಗೂ ಜಾಸ್ಮಿನ್ ಇಬ್ಬರೂ ಮುಖ್ಯ. ಎಲಿಮಿನೇಟ್ ಆದ ಜಾಸ್ಮಿನ್ ಕೂಡಾ ಅಲಿಯನ್ನು ಬೆಂಬಲಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ವಿಚಾರಕ್ಕೆ ನೀನು ತಲೆ ಕೆಡಿಸಿಕೊಳ್ಳಬೇಡ. ಒಂದು ಆಟ ಎಂದ ಮೇಲೆ ಸೋಲು, ಗೆಲುವು ಇರಲೇಬೇಕು" ಎಂದು ನನಗೆ ಧೈರ್ಯ ಹೇಳಿದ್ದಾರೆ ಎಂದು ಅಲ್ಹಾಮ್ ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details