ಬಾಲಿವುಡ್ನಲ್ಲಿ ಸದ್ಯಕ್ಕೆ ಚರ್ಚೆಯಲ್ಲಿರುವ ವಿಷಯವೆಂದರೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ವಿಚಾರ. 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿರುವ ಈ ಜೋಡಿ ಸಿನಿಮಾ ಬಿಡುಗಡೆ ನಂತರ ಮದುವೆಯಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಜೋಡಿ ಇತ್ತೀಚೆಗೆ ಹೆಚ್ಚು ಸುತ್ತಾಡುತ್ತಿದೆ.
ನ್ಯೂಯಾರ್ಕಿನಲ್ಲಿ ರಣಬೀರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ್ರಾ ಆಲಿಯಾ ಭಟ್...? - Alia secretly celebrates birthday with Ranbir in New York
ರಣಬೀರ್ ಹಾಗೂ ಆಲಿಯಾ ಈ ಹಿಂದೆ ನ್ಯೂಯಾರ್ಕಿಗೆ ಟ್ರಿಪ್ ಹೋಗಿದ್ದ ವೇಳೆ ಫೋಟೊವನ್ನು ಕ್ಲಿಕ್ ಮಾಡಿದ್ದು ಬರ್ತಡೇ ವಿಶ್ ಮಾಡಲು ನತಾಶಾ ಆ ಫೋಟೋವನ್ನು ಬಳಸಿಕೊಂಡಿದ್ದಾರೆ. ಈ ಬಾರಿ ಆಲಿಯಾ ಭಟ್ ಸಂಬಂಧಿ ಶಹೀನ್ ಭಟ್ , ಸ್ನೇಹಿತೆಯರಾದ ಆಕಾಂಕ್ಷ ರಂಜನ್ ಕಪೂರ್ ಹಾಗೂ ಮೇಘನಾ ಗೋಯಲ್ ಜೊತೆ ಬಹಳ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಈ ಬರ್ತಡೇ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಮಾರ್ಚ್ 15 ಆಲಿಯಾ ಭಟ್ ಜನ್ಮದಿನ. ಇಂಟರ್ನೆಟ್ನಲ್ಲಿ ನಿನ್ನೆಯಿಂದ ಹರಿದಾಡುತ್ತಿರುವ ಫೋಟೋಗಳನ್ನು ನೋಡಿದರೆ ಆಲಿಯಾ ಭಟ್, ರಣಬೀರ್ ಕಪೂರ್ ಜೊತೆ ನ್ಯೂಯಾರ್ಕಿಗೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಂಡ್ರಾ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಆಲಿಯಾ ಭಟ್ ಸ್ನೇಹಿತೆ ನತಾಶ ಪೂನವಾಲಾ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದು ಈ ಪೋಟೋದಲ್ಲಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಜೊತೆಯಾಗಿದ್ದಾರೆ. ವಿಶೇಷ ಎಂದರೆ ಅದೇ ಪ್ರೇಮ್ನಲ್ಲಿ ಮಲೈಕಾ ಅರೋರ ಹಾಗೂ ಅರ್ಜುನ್ ಕಪೂರ್ ಇದ್ದಾರೆ. ರಣಬೀರ್ ಕಪೂರ್ ಆಲಿಯಾ ಭಟ್ ಕೆನ್ನೆಗೆ ಹಾಗೂ ಅರ್ಜುನ್ ಕಪೂರ್ ಮಲೈಕಾ ಅರೋರ ಕೆನ್ನೆಗೆ ಮುತ್ತು ನೀಡುತ್ತಾ ಪೋಸ್ ನೀಡಲಾಗಿದೆ. ಫೋಟೋ ಮೇಲೆ ನತಾಶಾ 'ಬರ್ತಡೇ ಗರ್ಲ್, ಹ್ಯಾಪಿ ಹ್ಯಾಪಿ ಬರ್ತಡೇ' ಎಂದು ಬರೆದಿದ್ದಾರೆ. ಈ ಫೋಟೋ ನೋಡಿ ಆಲಿಯಾ ಭಟ್ ರಣಬೀರ್ ಕಪೂರ್ ಜೊತೆ ಆಲಿಯಾ ಭಟ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಆದರೆ ಮೂಲಗಳ ಪ್ರಕಾರ ರಣಬೀರ್ ಹಾಗೂ ಆಲಿಯಾ ಈ ಹಿಂದೆ ನ್ಯೂಯಾರ್ಕಿಗೆ ಟ್ರಿಪ್ ಹೋಗಿದ್ದ ವೇಳೆ ಫೋಟೊವನ್ನು ಕ್ಲಿಕ್ ಮಾಡಿದ್ದು ಬರ್ತಡೇ ವಿಶ್ ಮಾಡಲು ನತಾಶಾ ಆ ಫೋಟೋವನ್ನು ಬಳಸಿಕೊಂಡಿದ್ದಾರೆ. ಈ ಬಾರಿ ಆಲಿಯಾ ಭಟ್ ಸಂಬಂಧಿ ಶಹೀನ್ ಭಟ್ , ಸ್ನೇಹಿತೆಯರಾದ ಆಕಾಂಕ್ಷ ರಂಜನ್ ಕಪೂರ್ ಹಾಗೂ ಮೇಘನಾ ಗೋಯಲ್ ಜೊತೆ ಬಹಳ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಈ ಬರ್ತಡೇ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆಲಿಯಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ 'ಬ್ರಹ್ಮಾಸ್ತ್ರ' ಹಾಗೂ ಎಸ್. ಎಸ್. ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಚಿತ್ರದಲ್ಲಿ ನಟಿಸುತ್ತಿದ್ದು ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.