ಕರ್ನಾಟಕ

karnataka

ETV Bharat / sitara

29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಆಲಿಯಾ ಭಟ್.. ಬ್ರಹ್ಮಾಸ್ತ್ರ ಬಗ್ಗೆ ನಟಿ ಹೇಳಿದ್ದೇನು? - ಬ್ರಹ್ಮಾಸ್ತ್ರ ಚಿತ್ರದಲ್ಲಿ ಇಶಾ ಪಾತ್ರ

ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಚಿಕ್ಕ ಆಕರ್ಷಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆಲಿಯಾ ಅಭಿನಯದ ಇಶಾ ಪಾತ್ರದ ಅನೇಕ ಮನಸ್ಥಿತಿಗಳನ್ನು ವಿಡಿಯೋ ತೋರಿಸುತ್ತದೆ..

Alia Bhatt
ಆಲಿಯಾ ಭಟ್

By

Published : Mar 15, 2022, 11:54 AM IST

ತನ್ನ ಅದ್ಭುತ ನಟನೆಯಿಂದ ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಹೆಸರು ಗಳಿಸಿದ ಬಾಲಿವುಡ್​ ನಟಿ ಆಲಿಯಾ ಭಟ್​ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಹಿಂದಿ ಮಾತ್ರವಲ್ಲದೇ ಹಲವು ಭಾಷೆಯ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹೊಂದಿರುವ ನಟಿ ಆಲಿಯಾ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.

ತಮ್ಮ 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕ್ಯೂಟ್​ ಆಲಿಯಾ ಸದ್ಯದಲ್ಲೇ ಬಾಲಿವುಡ್​ ಸ್ಟಾರ್​ ರಣ್​ಬೀರ್​ ಕಪೂರ್​ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಇನ್ನೂ ತಮ್ಮ ಮುಂದಿನ ಚಿತ್ರ ಬ್ರಹ್ಮಾಸ್ತ್ರ ಕುರಿತು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತನ್ನ ಗೆಳೆಯ ರಣಬೀರ್ ಕಪೂರ್ ಜೊತೆಗೆ ಮೊದಲ ಬಾರಿಗೆ ಕಾಣಿಸಿಕೊಂಡಿರುವ ಚಿತ್ರ ಬ್ರಹ್ಮಾಸ್ತ್ರದಲ್ಲಿನ ಇಶಾ ಪಾತ್ರವನ್ನು ಪರಿಚಯಿಸಿದ್ದಾರೆ.

ಇದನ್ನೂ ಓದಿ:"ದಿ ಕಾಶ್ಮೀರ್ ಫೈಲ್ಸ್" ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ ​ಅಮಿರ್ ಖಾನ್​​

ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಚಿಕ್ಕ ಆಕರ್ಷಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆಲಿಯಾ ಅಭಿನಯದ ಇಶಾ ಪಾತ್ರದ ಅನೇಕ ಮನಸ್ಥಿತಿಗಳನ್ನು ವಿಡಿಯೋ ತೋರಿಸುತ್ತದೆ.

ಇಶಾ ಪಾತ್ರದ ಬಗ್ಗೆ ಹೇಳುತ್ತಾ, ಹ್ಯಾಪಿ ಬರ್ತ್ ಡೇ ಟು ಮಿ. ಅಯಾನ್ (ನಿರ್ದೇಶಕ ಅಯಾನ್‌ ಮುಖರ್ಜಿ)​ ಐ ಲವ್​ ಯೂ, ಥ್ಯಾಂಕ್​ ಯೂ ಎಂದು ಬರೆದಿದ್ದಾರೆ.

ಬ್ರಹ್ಮಾಸ್ತ್ರ ಸಿನಿಮಾ 2022ರ ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿದೆ. ಬ್ರಹ್ಮಾಸ್ತ್ರದ ಎರಡನೇ ಮತ್ತು ಮೂರನೇ ಭಾಗಗಳು 2024 ಮತ್ತು 2026ರಲ್ಲಿ ತೆರೆಗೆ ಬರಲಿವೆ.

ABOUT THE AUTHOR

...view details