ಕರ್ನಾಟಕ

karnataka

ETV Bharat / sitara

ರಾಜಮೌಳಿ ಬತ್ತಳಿಕೆಯಿಂದ ಬರ್ತಿದೆ ಮತ್ತೊಂದು ಪ್ಯಾನ್-ಇಂಡಿಯಾ ಚಲನಚಿತ್ರ - ಮಹೇಶ್​ ಬಾಬು ನಟನೆಯ ಪ್ಯಾನ್​ ಇಂಡಯಾ ಸಿನಿಮಾ

ನಿರ್ದೇಶಕ ಎಸ್‌.ಎಸ್.ರಾಜಮೌಳಿ ಅವರೊಂದಿಗೆ ಆಲಿಯಾ ಭಟ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ. ಮಹೇಶ್ ಬಾಬು ನಾಯಕ ನಟನಾಗಿ ನಟಿಸಲಿದ್ದು ಆಲಿಯಾ ಭಟ್ ನಾಯಕಿ ನಟಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ.

Alia Bhatt in Mahesh Babu's pan-India film with SS Rajamouli?
ಆರ್​ಆರ್​ಆರ್​ ಚಿತ್ರ ತಂಡ

By

Published : Mar 7, 2022, 8:29 PM IST

ಹೈದರಾಬಾದ್ (ತೆಲಂಗಾಣ):ಪ್ರಸಿದ್ಧ ಚಿತ್ರ ನಿರ್ದೇಶಕ ರಾಜಮೌಳಿಯ ಮುಂದಿನ ಚಿತ್ರವು ನಟ ಮಹೇಶ್ ಬಾಬು ಅವರನ್ನು ಹಿಂದಿ ಚಿತ್ರಲೋಕಕ್ಕೆ ಪರಿಚಯಿಸುವ ಸಾಧ್ಯತೆ ಕಾಣುತ್ತಿದೆ.

ಮಹೇಶ್​ ಬಾಬು ಮತ್ತು ಆಲಿಯಾ ಭಟ್​

ಟಾಲಿವುಡ್​ ಸೂಪರ್‌ಸ್ಟಾರ್ ಪ್ರಿನ್ಸ್ ಮಹೇಶ್​ ಬಾಬು ಅವರು ಎಸ್​.ಎಸ್. ರಾಜಮೌಳಿ ಅವರೊಂದಿಗೆ ತಮ್ಮ ಚೊಚ್ಚಲ ಪ್ಯಾನ್-ಇಂಡಿಯಾ ಚಿತ್ರಕ್ಕೆ ಸಿದ್ಧರಾಗಿದ್ದು ಅದಕ್ಕೆ ಬಾಲಿವುಡ್​ ನಟಿ ಆಲಿಯಾ ಭಟ್ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜಮೌಳಿ ನಿರ್ದೇಶನ RRR ಚಿತ್ರದಲ್ಲಿಯೂ ಆಲಿಯಾ ಭಟ್​ ನಾಯಕಿ ನಟಿಯಾಗಿ ನಟಿಸಿದ್ದು ಇದೇ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಹೀಗಿರುವಾಗಲೇ ಮತ್ತೊಂದು ಚಿತ್ರದಲ್ಲಿ ಮಹೇಶ್ ಬಾಬು ಅವರೊಂದಿಗೆ ಆಲಿಯಾ ಸ್ಕ್ರೀನ್​ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಆರ್​ಆರ್​ಆರ್​ ಚಿತ್ರ ತಂಡ

ಜಂಗಲ್ ಅಡ್ವೆಂಚರ್ ಕಥೆಯಾಧಾರಿತ ಚಿತ್ರ ಇದಾಗಿದ್ದು ಇದನ್ನು ರಾಜಮೌಳಿ ಅವರ ತಂದೆ ಮತ್ತು ಹಿರಿಯ ಚಿತ್ರಕಥೆಗಾರ ಕೆವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರಂತೆ. ಚಿತ್ರ ತಂಡ ನಟಿಯ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು ಶೀಘ್ರದಲ್ಲೇ ಈ ಬಗ್ಗೆ ಬಹಿರಂಗ ಮಾಡಲಿದೆಯಂತೆ.

ಆಲಿಯಾ ಭಟ್

ಈ ಬಗ್ಗೆ ಯಾರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ರಾಜಮೌಳಿ ಅವರು ಇಂತಹದ್ದೊಂದು ಕಥೆ ಹೆಣೆದಿದ್ದು ಮಹೇಶ್​ ಬಾಬು ಮತ್ತು ಆಲಿಯಾ ಭಟ್ ಜೊತೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಮಾತ್ರ ಹರಿದಾಡುತ್ತಿದೆ.

ಇತ್ತೀಚೆಗೆ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ಮಹೇಶ್ ಬಾಬು ಸಹ ತಮ್ಮ ಮುಂದಿನ ಸಿನಿಮಾ ಬಗ್ಗೆ ಹಾಗೂ ಎಸ್‌ಎಸ್ ರಾಜಮೌಳಿ ಅವರ ಬಗ್ಗೆ ಹೇಳಿಕೊಂಡಿದ್ದರು. ತಮ್ಮ ಕಾಂಬಿನೇಷನ್​ನಲ್ಲಿ ಪ್ಯಾನ್-ಇಂಡಿಯಾ ಚಿತ್ರ ಬರಲಿದ್ದು ಆರು ಭಾಷೆಯಲ್ಲಿ ತೆರೆಗೆ ಬರಲಿದೆ ಎಂದಿದ್ದರು.

ABOUT THE AUTHOR

...view details