ಹೈದರಾಬಾದ್:ಬಾಲಿವುಡ್ನ ಕ್ಯೂಟ್ ಕಪಲ್ ರಣವೀರ್ ಕಪೂರ್ ಹಾಗೂ ಆಲಿಯಾ ಭಟ್ ಈ ಹಿಂದಿನಿಂದಲೂ ಪರಸ್ಪರ ಪ್ರೀತಿಸುತ್ತಿದ್ದು, ಅನೇಕ ಸಲ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿರುವ ಬಾಲಿವುಡ್ ಬೆಡಗಿ ಆಲಿಯಾ ಭಟ್ ಹಾಗೂ ರಣವೀರ್ ಕಪೂರ್ ಡಿನ್ನರ್ನಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಡಿನ್ನರ್ನಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಂಡ ಆಲಿಯಾ-ರಣಬೀರ್! ಭಾಯ್ ಫ್ರೆಂಡ್ ರಣವೀರ್ ಕಪೂರ್ ಜೊತೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಆಲಿಯಾ ಭಟ್ ವಿಶೇಷವಾಗಿ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಈ ವೇಳೆ, ಆಲಿಯಾ ಸಹೋದರಿ ಶಾಹಿನ್ ಭಟ್ ಹಾಗೂ ತಾಯಿ ಸೋನಿ ರಜ್ದಾನ್ ಕೂಡ ಸಾಥ್ ನೀಡಿದ್ದಾರೆ.
ಇದನ್ನೂ ಓದಿರಿ:ಅಡಿಲೇಡ್ ಟೆಸ್ಟ್ ತಪ್ಪಿಸಿಕೊಂಡಿದ್ದಕ್ಕಾಗಿ ನಿಜಕ್ಕೂ ಕೋಪ ಬಂದಿತ್ತು: ಪ್ಯಾಟ್ ಕಮ್ಮಿನ್ಸ್
ಭೋಜನದ ಬಳಿಕ ಈ ಜೋಡಿ ಮುಂಬೈನಲ್ಲಿ ತಡವಾಗಿ ಕಾಣಿಸಿಕೊಂಡಿದ್ದು, ಈ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಶೇಷ ಎಂದರೆ ಆಲಿಯಾ ಭಟ್ ಮನೆಯಲ್ಲೇ ಕ್ರಿಸ್ ಮಸ್ ಡೇ ಪಾರ್ಟಿ ಸಹ ಆಯೋಜನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ನಟನೆ ಮಾಡಿರುವ ಬಹು ನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರ ಮುಂದಿನ ವರ್ಷ ತೆರೆ ಕಾಣಲಿದ್ದು, ಇದರಲ್ಲಿ ಅಮಿತಾಬ್ ಬಚ್ಚನ್ ಕೂಡ ನಟನೆ ಮಾಡಿದ್ದಾರೆ.