ಮುಂಬೈ: ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಮುಂಬರುವ ರೈಸ್ ರೋರ್ ರಿವೊಲ್ಟ್ (ಆರ್ಆರ್ಆರ್) ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಮುತ್ತಿನ ನಗರಿಯಲ್ಲಿ ನಡೆಯುತ್ತಿದೆ. ಇದೀಗ ಸಿನಿಮಾ ಸೆಟ್ಗೆ ಬಾಲಿವುಡ್ ನಟಿ ಆಲಿಯಾ ಭಟ್ ಆಗಮಿಸಿದ್ದು, ಇಡೀ ಚಿತ್ರತಂಡ ಅವರನ್ನು ಸ್ವಾಗತಿಸಿದೆ.
ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ನಡಿ ಆರ್ಆರ್ಆರ್ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಇನ್ನು "ನಮ್ಮ ಪ್ರೀತಿಯ ಸೀತಾ, ಅತ್ಯಂತ ಪ್ರತಿಭಾವಂತ ಮತ್ತು ಸುಂದರವಾದ ಆಲಿಯಾ ಭಟ್ಗೆ ಸ್ವಾಗತ" ಎಂದು ಡಿವಿವಿ ಎಂಟರ್‌ಟೈನ್‌ಮೆಂಟ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಡಿ.6ರಂದು ಹೈದರಾಬಾದ್ಗೆ ಬರುತ್ತಿದ್ದಾಗ ಕಾರಿನಲ್ಲಿ ತೆಗೆದ ಫೋಟೋವನ್ನು ಆಲಿಯಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. "ಆರ್ಆರ್ಆರ್ ಸಿನಿಮಾ ಸೆಟ್ನ ಹಾದಿಯಲ್ಲಿ" ಎಂದು ಕ್ಯಾಪ್ಶನ್ ನೀಡಿದ್ದರು.
ಓದಿ:'ಆರ್ಆರ್ಆರ್' ಅಡ್ಡಾಕ್ಕೆ ಎಂಟ್ರಿ ಕೊಟ್ಟ ಆಲಿಯಾ ಭಟ್
ಆರ್ಆರ್ಆರ್ ಸಿನಿಮಾ 20ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಎಂದು ತಿಳಿದುಬಂದಿದೆ. ಇನ್ನು ಈ ಚಿತ್ರದಲ್ಲಿ ರಾಮ್ಚರಣ್ ತೇಜ, ಜೂನಿಯರ್ ಎನ್ಟಿಆರ್ ಅಭಿನಯಿಸುತ್ತಿದ್ದಾರೆ. ಆಲಿಯಾ ಜೊತೆಗೆ, ಬಾಲಿವುಡ್ ಸೂಪರ್‌ಸ್ಟಾರ್ ಅಜಯ್ ದೇವ್‌ಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.