ನವದೆಹಲಿ:ನಟಿ ಆಲಿಯಾ ಭಟ್ ತಮ್ಮ ತಾತನ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಆಲಿಯಾ ಭಟ್ ಅವರ ತಾತನಿಗೆ ಈಗ 93 ವರ್ಷ. ಆಲಿಯಾ ಹಾಗೂ ಕುಟುಂಬದವರು ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
"ನನ್ನ ಸ್ಫೂರ್ತಿಗೆ 93 ವರ್ಷದ ಶುಭಾಶಯ. ಲವ್ ಯು ಗ್ಯಾಂಪ್ಸ್" ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿರುವ ಆಲಿಯಾ ತನ್ನ ಅಜ್ಜ, ತಾಯಿ ಸೋನಿ ರಜ್ದಾನ್ ಮತ್ತು ಸಹೋದರಿ ಶಾಹೀನ್ ಭಟ್ ಅವರೊಂದಿಗೆ ಪೋಸ್ ನೀಡುತ್ತಿರುವುದನ್ನು ನಾವು ನೋಡಬಹುದು.