ಹೈದರಾಬಾದ್: ಬಾಲಿವುಡ್ ಲವ್ ಬರ್ಡ್ಸ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಬಿಡುವಿಲ್ಲದ ಶೂಟಿಂಗ್ ಶೆಡ್ಯೂಲ್ ಮಧ್ಯೆಯೂ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದಿದ್ದಾರೆ. ರಣಬೀರ್ ಮತ್ತು ಅವರ ತಾಯಿ ನೀತು ಕಪೂರ್, ಸಹೋದರಿ ರಿಧಿಮಾ ಕಪೂರ್ ಸಾಹ್ನಿ ಮತ್ತು ಸಮೈರಾ ಅವರೊಂದಿಗೆ ಆಲಿಯಾ ಫ್ಯಾಮಿಲಿ ಮೂಡ್ನಲ್ಲಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ರಣಬೀರ್ ಮನೆಯಲ್ಲಿ ಆಲಿಯಾ ಭಟ್.. ಫ್ಯಾಮಿಲಿ ಮೂಡ್ನ ಫೋಟೋಗಳು ವೈರಲ್ - ಆಲಿಯಾ ಭಟ್ ಲೇಟೆಸ್ಟ್ ಸಿನಿಮಾ
ಗಂಗುಬಾಯಿ ಕಥಿಯಾವಾಡಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ತನ್ನ ಬಾಯ್ಫ್ರೆಂಡ್ ರಣಬೀರ್ ಕಪೂರ್ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.
![ರಣಬೀರ್ ಮನೆಯಲ್ಲಿ ಆಲಿಯಾ ಭಟ್.. ಫ್ಯಾಮಿಲಿ ಮೂಡ್ನ ಫೋಟೋಗಳು ವೈರಲ್ Alia Bhatt](https://etvbharatimages.akamaized.net/etvbharat/prod-images/768-512-12287699-93-12287699-1624869897614.jpg)
ಸೋಮವಾರ, ಆರ್ಕೆ ರಣಬೀರ್ ಕಪೂರ್ ಸಹೋದರಿ ರಿಧಿಮಾ ತಮ್ಮ ಕುಟುಂಬದೊಂದಿಗೆ ಆಲಿಯಾ ಕಳೆದ ಸಮಯದ ಫೋಟೋಗಳನ್ನು ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ನೀತು ಕಪೂರ್, ಸಹೋದರಿ ರೋಧಿಮಾ ಕಪೂರ್ ಸಾಹ್ನಿ ಮತ್ತು ಸಮೈರಾ ಅವರೊಂದಿಗೆ ಆಲಿಯಾ ಕಾಣಿಸಿಕೊಂಡಿದ್ರೆ, ಮತ್ತೊಂದು ಫೋಟೋದಲ್ಲಿ ಇಷ್ಟು ಜನ ಮಹಿಳಾ ಮಣಿಗಳ ನಡುವೆ ರಣಬೀರ್ ಕಪೂರ್ ಫೋಟೋಗೆ ಪೋಸ್ ನೀಡಿದ್ದಾರೆ.
ಶೀಘ್ರದಲ್ಲೇ ರಣಬೀರ್ ಜೊತೆ ಆಲಿಯಾ ಹಸೆಮಣೆ ಏರ್ತಾರೆ ಎಂಬ ಮಾತುಗಳು ಹರಿದಾಡ್ತಿವೆ. ಈ ಹಿಂದೆ ಆಲಿಯಾ ಅವರ ಹುಟ್ಟುಹಬ್ಬದ ಕೆಲವು ವಿಶೇಷ ಕ್ಷಣಗಳ ಫೋಟೋಸ್ ಅನ್ನು ನೀತು ಹಂಚಿಕೊಂಡಿದ್ದರು. ಇತ್ತೀಚೆಗೆ ರಣಬೀರ್ ಮನೆಯಲ್ಲಿನ ಎಲ್ಲಾ ಸಂಭ್ರಮದಲ್ಲೂ ಆಲಿಯಾ ಕಾಣಿಸಿಕೊಳ್ಳುತ್ತಿದ್ದು, ಪ್ರಿಯಕರ ರಣಬೀರ್ ಕುಟುಂಬಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.