ಹೈದರಾಬಾದ್ :ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯಾಗಿ ನಟಿಸಿರುವ ಮೊದಲ ಚಿತ್ರ 'ಬ್ರಹ್ಮಾಸ್ತ್ರ' ಬರೋಬ್ಬರಿ ನಾಲ್ಕು ವರ್ಷಗಳ ನಂತರ ಪೂರ್ಣಗೊಂಡಿತು. ಇತ್ತೀಚೆಗಷ್ಟೇ ಚಿತ್ರದ ಮೊದಲ ಭಾಗದ ಕೊನೆಯ ಶೆಡ್ಯೂಲ್ ಅನ್ನು ಕಾಶಿಯಲ್ಲಿ (ವಾರಣಾಸಿ) ಚಿತ್ರೀಕರಣ ಮಾಡುವ ಮೂಲಕ ಪೂರ್ಣಗೊಳಿಸಲಾಯಿತು. ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ, ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಸಿಂಗ್ ಶೂಟಿಂಗ್ ಮುಗಿಸಿ ಕಾಶಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಭೇಟಿ ಮಾಡಿರುವ ಸಾಕ್ಷಿಯಾಗಿ ಮೂವರೂ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಅಲ್ಲಿಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಐದು ವರ್ಷದ ಹಿಂದೆ ಅಂದ್ರೆ 2018ರಲ್ಲಿ ಚಿತ್ರದ ಚಿತ್ರೀಕರಣವನ್ನು ಆರಂಭ ಮಾಡಲಾಗಿತ್ತು. ಇತ್ತೀಚೆಗೆ ವಾರಣಾಸಿಯ ಬೀದಿ ಮತ್ತು ನದಿಯ ದಡದಲ್ಲಿ ಚಿತ್ರದ ಚಿತ್ರೀಕರಣವನ್ನು ನಡೆಸುವ ಮೂಲಕ ಪೂರ್ಣಗೊಳಿಸಲಾಯಿತು. ನಿರ್ಮಾಪಕ ಕರಣ್ ಜೋಹರ್ 'ಬ್ರಹ್ಮಾಸ್ತ್ರ'ಕ್ಕೆ ಹಣ ಹೂಡಿದ್ದು, ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಚಿತ್ರದ ಶೂಟಿಂಗ್ ಮುಗಿದ ನಂತರ ಅಯಾನ್, ರಣಬೀರ್ ಮತ್ತು ಆಲಿಯಾ ಕಾಶಿಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಭೇಟಿ ಬಳಿಕ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಅಲ್ಲಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿತ್ರೀಕರಣವು ಯಶಸ್ವಿಯಾಗಿ ಪೂರ್ಣಗೊಂಡಿದ್ದ ಹಿನ್ನೆಲೆ ಸೆಲೆಬ್ರಿಟಿಗಳಿಗೆ ಹೂವಿನ ಹಾರವನ್ನು ಹಾಕಿದ್ದನ್ನು ಫೋಟೋದಲ್ಲಿ ಗಮನಿಸಹಬುದು. ಒಂದು ಫೋಟೋದಲ್ಲಿ ವಧು-ವರರಂತೆ ಕಾಣುವ ರಣಬೀರ್ ಕೈಜೋಡಿಸಿ ನಿಂತಿದ್ದರೆ, ಆಲಿಯಾ-ಅಯಾನ್ ನಗುತ್ತಿರುವುದನ್ನು ಕಾಣಬಹುದು.