ಹೈದರಾಬಾದ್ :ನಟಿ ಅಲಯ ಎಫ್ ಅವರು ನ್ಯೂಯಾರ್ಕ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ತಾವಿದ್ದ ಅಪಾರ್ಟ್ಮೆಂಟ್ನಲ್ಲಿ ನಡೆದ ಭಯಾನಕ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಫ್ಲ್ಯಾಟ್ನಲ್ಲಿ ನಡೆದ ಆ ಒಂದು ಘಟನೆ ಬಳಿಕ ನಾನು ಅಪಾರ್ಟ್ಮೆಂಟ್ಗೆ ಹೋಗಲು ಹೆದರುತ್ತಿದ್ದೆ. ಅಲ್ಲಿ ಏನೇನೋ ಘಟನೆಗಳು ನಡೆಯುತ್ತಿದ್ದವು ಎಂದು ಹೇಳಿಕೊಂಡಿದ್ದಾರೆ.
'spooky experience' ಎಂಬ ಡಿಜಿಟಲ್ ಫ್ಲಾಟ್ಫಾರ್ಮ್ನಲ್ಲಿ ತಾವು ಭಯಭೀತರಾಗಿದ್ದ ಸನ್ನಿವೇಶವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಾನು ವಿದ್ಯಾಭ್ಯಾಸಕ್ಕೆಂದು ನ್ಯೂಯಾರ್ಕ್ನಲ್ಲಿದ್ದಾಗ ನಾನಿದ್ದ ಅಪಾರ್ಟ್ಮೆಂಟ್ನಲ್ಲಿ ಭೂತವಿತ್ತು. ಕೆಲವೊಮ್ಮೆ ಭಯಾನಕ ಎನಿಸುವ ದೊಡ್ಡದಾಗಿ ಶಬ್ಧ ಮಾಡುವ ಹೆಜ್ಜೆ ಸಪ್ಪಳಗಳನ್ನು ಕೇಳುತ್ತಿದ್ದೆ. ಕೆಲವೊಮ್ಮೆ ಬಾತ್ರೂಮ್ನಲ್ಲಿ ಶವರ್ ತಾನಾಗೇ ಆನ್ ಆಗುತ್ತಿತ್ತು ಎಂದು ತಮಗಾದ ಎದೆ ಝಲ್ ಎನಿಸುವ ಅನುಭವವನ್ನು ಹಂಚಿಕೊಂಡಿದ್ದಾರೆ.