ಹೈದರಾಬಾದ್: ಚಿತ್ರರಂಗದ ಸಾಧಕರಿಗೆ ನೀಡುವ ಪ್ರಶಸ್ತಿಗಳಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಒಂದು. ಬಾಲಿವುಡ್ನ ಖ್ಯಾತ ನಟಿ ಪೂಜಾ ಬೇಡಿ ಅವರ ಮಗಳು ಹಾಗೂ ನಟ ಕಬೀರ್ ಬೇಡಿ ಅವರ ಮೊಮ್ಮಗಳು ಅಲಯಾ ಎಫ್ ಇದೀಗ ಅತ್ಯುತ್ತಮ ಹೊಸ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಪ್ರಶಸ್ತಿ ಕುರಿತು ಅಭಿಪ್ರಾಯ ಹಂಚಿಕೊಂಡ ಅಲಯಾ ಎಫ್ ಅಲಯಾ ಬಾಲಿವುಡ್ನಲ್ಲಿ ಸೈಫ್ ಅಲಿ ಖಾನ್ ಅಭಿನಯದ 'ಜವಾನಿ ಜಾನೆಮನ್' ಸಿನಿಮಾದ ಮೂಲಕ ಮೊದಲ ಬಾರಿಗೆ ಕಾಣಿಸಿಕೊಂಡರು. ಇದೀಗ ಅತ್ಯುತ್ತಮ ಹೊಸ ನಟಿ ಅಥವಾ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇನ್ನು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಈ ನಟಿ, ಜವಾನಿ ಜಾನೆಮನ್ ಚಿತ್ರಕ್ಕಾಗಿ ಪ್ರಶಸ್ತಿ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಸೈಫ್ ಅಲಿ ಖಾನ್ ಮತ್ತು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ನನ್ನ ಚೊಚ್ಚಲ ಸಿನಿಮಾಕ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಸಂತಸ ನೀಡಿದೆ. ಇದು ನನ್ನ ಜೀವನದ ದೊಡ್ಡ ಗುರಿ ಎಂದು ತಿಳಿಸಿದ್ದಾರೆ.
ಇನ್ನು, 66ನೇ ಫಿಲ್ಮ್ ಫೇರ್ ಅವಾರ್ಡ್ಸ್ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಾಪ್ಸೀ ಪನ್ನು ಪಡೆದಿದ್ದು, ಮರಣೋತ್ತರವಾಗಿ ಇರ್ಫಾನ್ ಖಾನ್ ಅವರಿಗೆ 2021ನೇ ಸಾಲಿನ ಜೀವಮಾನ ಸಾಧಕ ಪ್ರಶಸ್ತಿ ಸಿಕ್ಕಿದೆ.
ಅಲ್ಲದೆ, ‘ಅಂಗ್ರೇಜಿ ಮೀಡಿಯಂ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೊರೊನಾ ವೈರಸ್ ಎರಡನೇ ಅಲೆಯ ಭೀತಿ ಕಾರಣಕ್ಕಾಗಿ ಈ ಬಾರಿ ಫಿಲ್ಮ್ ಫೇರ್ ಸಮಾರಂಭವನ್ನು ಸರಳವಾಗಿ ನೆರವೇರಿಸಲಾಯಿತು.