ಕರ್ನಾಟಕ

karnataka

ETV Bharat / sitara

'ಬೆಲ್ ಬಾಟಮ್' ಚಿತ್ರೀಕರಣ ಮುಕ್ತಾಯ...ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ ಅಕ್ಕಿ - ವಾಣಿ ಕಪೂರ್ ನಟನೆಯ ಬೆಲ್ ಬಾಟಮ್

ರಂಜಿತ್ ತಿವಾರಿ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್, ವಾಣಿ ಕಪೂರ್, ಲಾರಾ ದತ್ತ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸ್ಪೈ, ಥ್ರಿಲ್ಲರ್ 'ಬೆಲ್ ಬಾಟಮ್' ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. 2 ಏಪ್ರಿಲ್ 2021 ರಂದು ಚಿತ್ರ ತೆರೆಗೆ ಬರಲಿದೆ.

bell bottom shoot complete
'ಬೆಲ್ ಬಾಟಮ್' ಚಿತ್ರೀಕರಣ ಮುಕ್ತಾಯ

By

Published : Oct 1, 2020, 1:46 PM IST

ಅಕ್ಷಯ್ ಕುಮಾರ್ ನಟಿಸಿರುವ ಸ್ಪೈ​​, ಥ್ರಿಲ್ಲರ್​ ಬೆಲ್​ ಬಾಟಮ್ ಚಿತ್ರದ ಶೂಟಿಂಗ್ ಮುಗಿದಿದ್ದು ಕೊರೊನಾ ಸಮಯದಲ್ಲಿ ಶೂಟಿಂಗ್ ಆರಂಭಿಸಿ, ಮುಗಿಸಿದ ಮೊದಲ ಚಿತ್ರ ಎಂಬ ಹೆಸರಿಗೆ ಪಾತ್ರವಾಗಿದೆ. ಚಿತ್ರತಂಡದ ಸದಸ್ಯರ ಪ್ರೋತ್ಸಾಹದಿಂದ ಇದು ಸಾಧ್ಯವಾಯ್ತು ಎಂದಿರುವ ಅಕ್ಷಯ್ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಲೈಟ್ ಬಾಯ್, ಮೇಕಪ್​ ಮ್ಯಾನ್, ತಂತ್ರಜ್ಞರು, ಚಿತ್ರದ ನಾಯಕಿ ವಾಣಿ, ಲಾರಾ ದತ್ತ, ಹುಮಾ ಖುರೇಷಿ, ನಿರ್ದೇಶಕ ರಂಜಿತ್ ತಿವಾರಿ, ಪ್ರೊಡಕ್ಷನ್ ತಂಡದ ಪ್ರತಿ ಸದಸ್ಯರಿಗೂ ನಾನು ಥ್ಯಾಂಕ್ಸ್ ಹೇಳಲು ಬಯಸುತ್ತೇನೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ನಮ್ಮ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ನಂಬಿಕೆ ಇದೆ. ಮತ್ತೆ ನಾವೆಲ್ಲರೂ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗುತ್ತಿದ್ದೇವೆ. ಕೊರೊನಾ ಸಂದರ್ಭದಲ್ಲಿ ಎಲ್ಲಾ ಮುನ್ನೆಚರಿಕೆ ಕ್ರಮಗಳನ್ನು ಕೈಗೊಂಡು ನಾವು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇವೆ ಎಂದು ಅಕ್ಷಯ್ ಕುಮಾರ್​​ ಸಂತೋಷ ವ್ಯಕ್ತಪಡಿಸಿದರು.

'ಬೆಲ್ ಬಾಟಮ್' ಚಿತ್ರದಲ್ಲಿ ಅಕ್ಷಯ್ ಕುಮಾರ್

ನಿರ್ಮಾಪಕ ಜಾಕಿ ಭಗ್ನಾನಿ ಮಾತನಾಡಿ ಕೊರೊನಾ ಸಮಯದಲ್ಲಿ ಹಾಲಿವುಡ್​​​ನಲ್ಲಿ ಕೂಡಾ ಕೆಲವೊಂದು ಮೆಗಾ ಬಜೆಟ್ ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ. ನಮ್ಮನ್ನು ನಂಬಿ ಕೆಲಸ ಮಾಡಿದ ಚಿತ್ರತಂಡಕ್ಕೆ ನಾವು ಚಿರಋಣಿ. ಎಲ್ಲಾ ಕೆಲಸವೂ ಅಂದುಕೊಂಡದ್ದಕ್ಕಿಂತ ಉತ್ತಮವಾಗಿ ಪೂರ್ಣಗೊಂಡಿರುವುದು ಸಂತೋಷವಾಗಿದೆ ಎಂದು ಹೇಳಿದರು. ಮತ್ತೊಬ್ಬ ನಿರ್ಮಾಪಕ ದೀಪ್ಷಿಕಾ ದೇಶ್​ಮುಖ್​ ಹಾಗೂ ನಿರ್ದೇಶಕ ರಂಜಿತ್ ಕೂಡಾ ಕೂಡಾ ಮಾತನಾಡಿ ಅಕ್ಷಯ್ ಕುಮಾರ್ ಹಾಗೂ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದರು.

ಪರ್ವೇಜ್ ಶಾಯಿಕ್ ಹಾಗೂ ಆಸೀಮ್ ಆರೋರ 'ಬೆಲ್ ಬಾಟಮ್' ಚಿತ್ರದ ಕಥೆಯನ್ನು ಬರೆದಿದ್ದಾರೆ. ಪೂಜಾ ಎಂರ್ಟೈನ್​​ಮೆಂಟ್ ಹಾಗೂ ಎಮ್ಮಿ ಎಂರ್ಟೈನ್​​ಮೆಂಟ್ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಿಸಲಾಗಿದೆ. 2 ಏಪ್ರಿಲ್ 2021 ಕ್ಕೆ ಸಿನಿಮಾ ತೆರೆ ಕಾಣಲಿದೆ.

ABOUT THE AUTHOR

...view details