ಮುಂಬೈ:ಮಹಾಮಾರಿ ಕೊರೊನಾ ವೈರಸ್ ಕಾರಣ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಸಿನಿಮಾ ಚಿತ್ರಗಳ ಚಿತ್ರೀಕರಣ ಕೆಲಸ ಇದೀಗ ಶುರುವಾಗಿದೆ. ತಮ್ಮ ಮುಂಬರುವ ಹೊಸ ಚಿತ್ರಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ತಂಡ ವಿದೇಶಕ್ಕೆ ಹಾರಿದೆ.
ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ 'ಬೆಲ್ ಬಾಟಂ' ಚಿತ್ರದಲ್ಲಿ ಲಾರಾ ದತ್ತಾ, ಹುಮಾ ಖುರೇಷಿ, ಆದಿಲ್ ಹುಸೇನ್, ವಾಣಿ ಕಪೂರ್ ಸೇರಿದಂತೆ ಅನೇಕ ನಟರಿದ್ದಾರೆ. ಈ ಚಿತ್ರವನ್ನು ಗ್ಲ್ಯಾಸ್ಗೋ, ಯುಕೆ, ಸ್ಕಾಟ್ಲೆಂಡ್ನಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ.