ಹೈದರಾಬಾದ್:ಬಾಲಿವುಡ್ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರು 'ಓ ಮೈ ಗಾಡ್ - 2' ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಚಿತ್ರದಲ್ಲಿ ಅವರು ಶಿವನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಶನಿವಾರ ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ರಿವೀಲ್ ಮಾಡಿದ್ದಾರೆ. ಜೊತೆಗೆ ಅವರು ಚಿತ್ರದ ಮೊದಲ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದು, ಇದರಲ್ಲಿ ಅವರು ಶಿವನ ಅವತಾರದಲ್ಲಿರುವುದನ್ನು ಕಾಣಬಹುದು.
"ಕರ್ತಾ ಕರೇ ನಾ ಕರ್ ಸಕೆ ಶಿವ ಕರೆ ಸೋ ಹೋಯೆ.#OMG2 ಗೆ ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳು ಬೇಕು, ಇದು ಒಂದು ಪ್ರಮುಖ ಸಾಮಾಜಿಕ ಸಮಸ್ಯೆಯನ್ನು ಪ್ರತಿಬಿಂಬಿಸಲು ನಮ್ಮ ಪ್ರಾಮಾಣಿಕ ಮತ್ತು ವಿನಮ್ರ ಪ್ರಯತ್ನ. ನಮ್ಮ ಈ ಪ್ರಯಾಣಕ್ಕೆ ಆದಿಯೋಗಿಯ ಶಾಶ್ವತ ಶಕ್ತಿಯ ಆಶೀರ್ವಾದ ಇರಲಿ, ಹರ ಹರ ಮಹಾದೇವ''ಎಂದು ಅಕ್ಷಯ್ ಕುಮಾರ್ ಕ್ಯಾಪ್ಷನ್ ಕೊಟ್ಟಿದ್ದಾರೆ.