ಕರ್ನಾಟಕ

karnataka

ಡಬಲ್ ರೋಲ್ ಇರೋ ಬಿಗ್ ಬಜೆಟ್​ನ ಸೈ-ಫೈ ಸಿನಿಮಾಗೆ ಅಕ್ಷಯ್​ ಕುಮಾರ್​ ಒಪ್ಪಿಗೆ

By

Published : Dec 7, 2020, 3:53 PM IST

ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಬಿಗ್ ಬಜೆಟ್​ನ ಸೈ-ಫೈ ಸಿನಿಮಾಗೆ ಒಪ್ಪಿಗೆ ನೀಡಿದ್ದು, ಅವರು ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ.

Akshay Kumar
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್

ಮುಂಬೈ :'ರಾಮ್ ಸೇತು' ಘೋಷಣೆಯ ನಂತರ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿರ್ಮಾಪಕ ಜಗನ್ ಶಕ್ತಿ ಅವರ ಬಿಗ್ ಬಜೆಟ್​ನ ಸೈ-ಫೈ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.

2019ರಲ್ಲಿ ಬಿಡುಗಡೆಯಾದ ಮಿಷನ್ ಮಂಗಲ್ ಚಿತ್ರದ ನಂತರ ಮತ್ತೊಮ್ಮೆ ನಟ ಅಕ್ಷಯ್ ಜಗನ್ ಅವರ ಜೊತೆಗೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವೆಬ್​ಲಾಯ್ಡ್​ ಪತ್ರಿಕೆಯೊಂದು ವರದಿ ಮಾಡಿದೆ.

ಈ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಚಿತ್ರದಲ್ಲಿ ಅತಿ ಹೆಚ್ಚು ವಿಎಫ್​ಎಕ್ಸ್ ಹೊಂದಿರಬೇಕಾದ ಕಾರಣದಿಂದ ಭಾರಿ ಬಜೆಟ್​ನಲ್ಲಿ ಚಿತ್ರ ಮೂಡಿಬರಲಿದೆ ಎಂದು ವರದಿಗಳು ಹೇಳುತ್ತಿವೆ.

ಇದನ್ನೂ ಓದಿ:ಅಕ್ಕಿಯ 'ಫೌಜಿ' ಗೇಮಿಂಗ್ ಬಿಡುಗಡೆಗೆ ದಿನಾಂಕ ಫಿಕ್ಸ್​​: 24 ಗಂಟೆಗಳ ಒಳಗೆ 10 ಲಕ್ಷ ಪ್ರಿ-ಬುಕ್ಕಿಂಗ್​!

ಇನ್ನೊಂದು ಮಹತ್ವದ ವಿಚಾರವೆಂದರೆ ಇದೇ ಚಿತ್ರದಲ್ಲಿ ಅಕ್ಷಯ್ ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಇದಕ್ಕೂ ಮೊದಲು ಅಕ್ಷಯ್ ಜೈ ಕಿಸಾನ್, ಕಿಲಾಡಿ 420, ಅಫ್ಲಾತೂನ್, ರೌಡಿ ರಾಥೋರ್​ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಜನರನ್ನು ರಂಜಿಸಿದ್ದರು. ಈಗ ಸದ್ಯಕ್ಕೆ ರಂಜಿತ್ ತಿವಾರಿ ಅವರ ಬೆಲ್​ ಬಾಟಂ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ABOUT THE AUTHOR

...view details