ಕರ್ನಾಟಕ

karnataka

ETV Bharat / sitara

ಕೋವಿಡ್​ನಿಂದ ಚೇತರಿಸಿಕೊಂಡ ಅಕ್ಷಯ್ ಕುಮಾರ್.. ಟ್ವಿಂಕಲ್ ಖನ್ನಾ ಮಾಹಿತಿ - ಅಕ್ಷಯ್ ಕುಮಾರ್ ಕೋವಿಡ್​ನಿಂದ ಗುಣಮುಖ

ಕೋವಿಡ್ ದೃಢಪಟ್ಟ ಬಳಿಕ ಏಪ್ರಿಲ್ 4 ರಂದು ಅಕ್ಷಯ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಚೇತರಿಸಿಕೊಂಡಿರುವುದಾಗಿ ಅವರ ಪತ್ನಿ ಮಾಹಿತಿ ನೀಡಿದ್ದಾರೆ.

Akshay kumar covid negativ
ಕೋವಿಡ್​ನಿಂದ ಚೇತರಿಸಿಕೊಂಡ ಅಕ್ಷಯ್ ಕುಮಾರ್

By

Published : Apr 12, 2021, 7:37 PM IST

ಹೈದರಾಬಾದ್ : ಕೋವಿಡ್ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಚೇತರಿಸಿಕೊಂಡಿರುವುದಾಗಿ ಅವರ ಪತ್ನಿ ಟ್ವಿಂಕಲ್ ಖನ್ನಾ ತಿಳಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

ಕೋವಿಡ್ ದೃಢಪಟ್ಟ ಬಳಿಕ ಏಪ್ರಿಲ್ 4 ರಂದು ಅಕ್ಷಯ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರು. ಮುಂಜಾಗೃತ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು.

ಕೋವಿಡ್ ಸೋಂಕು ದೃಢಪಡುವ ಮೊದಲು ರಾಮ ಸೇತು ಚಿತ್ರದ ಚಿತ್ರೀಕರಣದಲ್ಲಿ ಅಕ್ಷಯ್ ತೊಡಗಿಸಿಕೊಂಡಿದ್ದರು. ಅಕ್ಷಯ್ ಜೊತೆ ಚಿತ್ರೀಕರಣದಲ್ಲಿ ತೊಡಗಿದ್ದ 45 ಮಂದಿ ಕೂಡ ಕೋವಿಡ್​ಗೆ ತುತ್ತಾಗಿದ್ದರು. ಹಾಗಾಗಿ, ಸಿನಿಮಾ ಚಿತ್ರೀಕರಣವನ್ನು ಮುಂದೂಡಲಾಗಿತ್ತು.

ಓದಿ : ನಮ್ಮ ತಂದೆ ಇಲ್ಲ ಎಂಬ ಕೊರಗು ನನ್ನಲ್ಲಿ ಬಂದಿಲ್ಲ : ಪುನೀತ್ ರಾಜ್‍ಕುಮಾರ್

ರಾಮ ಸೇತು ಹೊರತುಪಡಿಸಿ ಅಕ್ಷಯ್ ಕುಮಾರ್ ಅವರ ಇತರ ಚಿತ್ರಗಳಾದ ಹೌಸ್​ಫುಲ್ 5, ಬಚ್ಚನ್ ಪಾಂಡೆ, ಅತ್ರಂಗಿ ರೆ, ಬೆಲ್ ಬಾಟಮ್ ಮತ್ತು ಸೂರ್ಯವಂಶಿ ಚಿತ್ರ ಶೂಟಿಂಗ್ ಪೂರ್ತಿಗೊಳಿಸಿದೆ.

ABOUT THE AUTHOR

...view details