ಕರ್ನಾಟಕ

karnataka

ETV Bharat / sitara

ಅಕ್ಕಿ ಜೊತೆ ಸ್ಕ್ರೀನ್​ ಶೇರ್​ ಮಾಡ್ತಾರೆ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ! - ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ

ಬಾಲಿವುಡ್ ಸೂಪರ್‌ ಸ್ಟಾರ್ ಅಕ್ಷಯ್ ಕುಮಾರ್ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾರ ಹೊಸ ಪ್ರಾಜೆಕ್ಟ್‌ನಲ್ಲಿ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಅವರೊಂದಿಗೆ ನಟಿಸಲು ಸಜ್ಜಾಗಿದ್ದಾರೆ.

Akshay Kumar teams up with Suniel Shetty's son Ahan for new project
ಅಕ್ಕಿ ಜೊತೆ ಸ್ಕ್ರೀನ್​ ಶೇರ್​ ಮಾಡ್ತಾರೆ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ!

By

Published : Jun 21, 2021, 5:54 PM IST

ಮುಂಬೈ: ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಹೊಸ ಪ್ರಾಜೆಕ್ಟ್​ನಲ್ಲಿ ನಟ ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಸ್ಕ್ರೀನ್​ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಮಿಲನ್ ಲುಥ್ರಿಯಾ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಅರಾನ್​ಗೆ ಜೋಡಿಯಾಗಿ ತಾರಾ ಸುತಾರಿಯಾ ನಟಿಸುತ್ತಿದ್ದಾರೆ. 2018ರ ತೆಲುಗು ಹಿಟ್ "ಆರ್​ಎಕ್ಸ್​ 100" ನ ರಿಮೇಕ್ ಆಗಿದೆ. ಈ ಬಗ್ಗೆ ನಿರ್ಮಾಪಕರು ಅಕ್ಷಯ್ ಕುಮಾರ್ ಅವರೊಂದಿಗೆ ಪ್ರಾಜೆಕ್ಟ್​ ಬಗ್ಗೆ ಸಂಪೂರ್ಣವಾಗಿ ಮಾತನಾಡಿದ್ದು, ಅಕ್ಕಿ ಸಹ ಯೆಸ್​ ಎಂದಿದ್ದಾರೆ.

ಪ್ರಸ್ತುತ ಪಾಜೆಕ್ಟ್​ ಸಿದ್ದವಾಗುತ್ತಿದ್ದು, ಶೂಟಿಂಗ್​ ಶೀಘ್ರದಲ್ಲೇ ಆರಂಭವಾಗಲಿದೆಯಂತೆ. ಇಬ್ಬರು ನಟರ ಈ ಆಕ್ಷನ್ ಪವರ್ ಪ್ಯಾಕ್​ಗಾಗಿ ಇಡೀ ಬಾಲಿವುಡ್​ ಎದುರು ನೋಡುತ್ತಿದೆ. ಅಕ್ಷಯ್ ಮತ್ತು ಅಹಾನ್ ಮೊದಲ ಬಾರಿಗೆ ಸ್ಕ್ರೀನ್​ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಅಹಾನ್ ನಟಿಸಿರುವ "ತಡಾಪ್" ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಓದಿ:ಸಾವಿರಕ್ಕೂ ಹೆಚ್ಚು ಮಂದಿಯ ಬಲವಂತದ ಮತಾಂತರ: ಇಬ್ಬರ ಬಂಧಿಸಿದ ATS

ABOUT THE AUTHOR

...view details