ಕರ್ನಾಟಕ

karnataka

ETV Bharat / sitara

ನಾನು ಯಾವುದೇ ಧರ್ಮ ನಂಬುವುದಿಲ್ಲ, ನಾನು ಭಾರತೀಯ ಮಾತ್ರ... ಹೀಗೆಂದ ನಟನಿವರು! - ಅಕ್ಷಯ್ ಕುಮಾರ್

ಇತ್ತಿಚೆಗೆ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿರುವ ನಾಯಕ ಅಕ್ಷಯ್​ ಕುಮಾರ್, ಕೇವಲ ಒಂದು ಧರ್ಮವಿದೆ ಅದು "ಭಾರತೀಯನಾಗಿರುವುದು" ಎಂದು ಹೇಳಿದ್ದಾರೆ. ನನ್ನ ಮುಂಬರುವ ಚಿತ್ರ ಸೂರ್ಯವಂಶಿ ಕೂಡ ಇದೇ ಉದ್ದೇಶವನ್ನಾಧರಿಸಿಕೊಂಡು ರಚನೆಯಾಗಿದೆ ಎಂದು ತಿಳಿಸಿದ್ದಾರೆ.

Akshay Kumar
ಅಕ್ಷಯ್ ಕುಮಾರ್

By

Published : Mar 9, 2020, 1:41 PM IST

ಮುಂಬೈ: ಸೂರ್ಯವಂಶಿ ಸಿನಿಮಾ 2020ರ ಮೋಸ್ಟ್​ ಎಕ್ಸ್​ಪೆಕ್ಟೆಡ್​​ ಬಾಲಿವುಡ್​ ಆ್ಯಕ್ಷನ್​ ಸಿನಿಮಾ. ಈ ಚಿತ್ರದಲ್ಲಿ ಅಕ್ಷಯ್​​ ಕುಮಾರ್​ ಡಿಸಿಪಿ ವೀರ್​ ಸೂರ್ಯವಂಶಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿದ್ದು, ಈಗಾಗಲೇ ಚಿತ್ರದ ಅಫೀಶಿಯಲ್​ ಟ್ರೈಲರ್​​ ರಿವೀಲ್​ ಆಗುವುದರ ಜೊತೆಗೆ ಹೆಚ್ಚು ಮನ್ನಣೆ ಕೂಡ ಪಡೆದಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಉಗ್ರರ ಆಟಾಟೋಪ, ಪೊಲೀಸರ ಸಾಹಸಮಯವನ್ನೊಳಗೊಂಡ ಕಥಾಹಂದರವನ್ನ ಈ ಸಿನಿಮಾ ಹೊಂದಿದೆ.

ಈ ಸಿನಿಮಾ ಕುರಿತಂತೆ ಇತ್ತಿಚೆಗೆ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿರುವ ನಾಯಕ ಅಕ್ಷಯ್​ ಕುಮಾರ್, ಕೇವಲ ಒಂದು ಧರ್ಮವಿದೆ ಅದು "ಭಾರತೀಯನಾಗಿರುವುದು" ಎಂದು ಹೇಳಿದ್ದಾರೆ. ನನ್ನ ಮುಂಬರುವ ಚಿತ್ರ ಸೂರ್ಯವಂಶಿ ಕೂಡ ಇದೇ ಉದ್ದೇಶವನ್ನಾಧರಿಸಿಕೊಂಡು ರಚನೆಯಾಗಿದೆ.

ನಾವು ನಕಾರಾತ್ಮಕ ಮತ್ತು ಸಕಾರಾತ್ಮಕ ಪಾತ್ರಗಳನ್ನು ಹೊಂದಿರುವ ಚಲನಚಿತ್ರಗಳನ್ನು ತಯಾರಿಸುತ್ತೇವೆ. ನಾನು ಕೇವಲ ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಪ್ರತಿ ಚಿತ್ರದಲ್ಲೂ ಒಳ್ಳೆಯ ಮತ್ತು ಕೆಟ್ಟ ಎರಡೂ ಪಾತ್ರಗಳು ಇರುತ್ತವೆ. ಚಿತ್ರದಿಂದ ಯಾವ ಸಂದೇಶವನ್ನು ಮುಟ್ಟಿಸಲಿಚ್ಚಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯ. ಪ್ರೇಕ್ಷಕರು ಸಾಕಷ್ಟು ಚಾಣಾಕ್ಷರಿದ್ದಾರೆ ಎಂದರು.

ಸೂರ್ಯವಂಶಿ ನನ್ನ ಮತ್ತು ರೋಹಿತ್ ಅವರ ಮೊದಲ ಪ್ರಾಜೆಕ್ಟ್, ಈ ಚಿತ್ರದಲ್ಲಿ ಕೆಲಸ ಮಾಡಲು ಉತ್ತಮ ಸಂತಸವಿದೆ ಅಕ್ಷಯ್​, ಸೂರ್ಯವಂಶಿ ಚಿತ್ರದಲ್ಲಿ​ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥನಾಗಿ ಮಿಂಚಿದ್ದಾರೆ. ದೇಶದ ಪ್ರಮುಖ ನಗರವಾದ ಮುಂಬೈನಲ್ಲಿ ಉಗ್ರರ ಅಟ್ಟಹಾಸವನ್ನ ಮೆಟ್ಟಿ ನಿಲ್ಲುವುದೇ ಸೂರ್ಯವಂಶಿಯ ರೋಚಕ ಕಥೆ.

ಇನ್ನು ಈ ಮಾರ್ಚ್ 24 ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ಕತ್ರಿನಾ ಕೈಫ್, ಜಾವೇದ್ ಜಾಫರ್​ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ

ABOUT THE AUTHOR

...view details