ದೇಶದಲ್ಲಿ ಕೊರೊನಾ ವೈರಸ್ ಸಮಸ್ಯೆ ಆರಂಭವಾದಾಗಿನಿಂದ ಅನೇಕ ಸಿನಿಮಾ ನಟರು ಜನರ ಸಹಾಯಕ್ಕೆ ನಿಂತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಧಾನಮಂತ್ರಿ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇದೀಗ ಮತ್ತೆ ಅಕ್ಷಯ್ ಕುಮಾರ್ 45 ಲಕ್ಷ ನೀಡಿದ್ದಾರೆ.
ಮತ್ತೆ 45 ಲಕ್ಷ ದೇಣಿಗೆ ನೀಡಿದ ಅಕ್ಷಯ್ ಕುಮಾರ್...ಈ ಬಾರಿ ಸಹಾಯ ಮಾಡಿದ್ದು ಯಾರಿಗೆ...? - ಕೊರೊನಾ ಹೋರಾಟಕ್ಕೆ ನಿಂತಿರುವ ಅಕ್ಷಯ್ ಕುಮಾರ್
ಪ್ರಧಾನಮಂತ್ರಿ ಪರಿಹಾರ ನಿಧಿಗೆ ಈ ಮೊದಲು 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈಗ ಸಿನಿ, ಕಿರುತೆರೆ ದಿನಕೂಲಿ ಕಾರ್ಮಿಕರ ನೆರವಿಗೆ 45 ಲಕ್ಷ ರೂಪಾಯಿ ಹಣದ ಸಹಾಯ ಮಾಡಿದ್ದಾರೆ.
![ಮತ್ತೆ 45 ಲಕ್ಷ ದೇಣಿಗೆ ನೀಡಿದ ಅಕ್ಷಯ್ ಕುಮಾರ್...ಈ ಬಾರಿ ಸಹಾಯ ಮಾಡಿದ್ದು ಯಾರಿಗೆ...? Akshay Kumar](https://etvbharatimages.akamaized.net/etvbharat/prod-images/768-512-7369923-191-7369923-1590602926276.jpg)
ಚಿತ್ರರಂಗ, ಕಿರುತೆರೆಯ ದಿನಗೂಲಿ ಕಾರ್ಮಿಕರ ಸಹಾಯಕ್ಕಾಗಿ ಅಕ್ಷಯ್ ಕುಮಾರ್ ಈ 45 ಲಕ್ಷ ರೂಪಾಯಿ ಹಣವನ್ನು ಸಹಾಯ ಮಾಡಿದ್ದಾರೆ. ಸಿನಿ ಮತ್ತು ಟಿವಿ ಕಲಾವಿದರ ಸಂಘಕ್ಕೆ ಅಕ್ಷಯ್ ಚೆಕ್ ತಲುಪಿಸಿದ್ದಾರೆ. ಇದಕ್ಕೂ ಮುನ್ನ ಅಕ್ಷಯ್ ಕುಮಾರ್ ಮುಂಬೈ ಪೊಲೀಸರ ಪರಿಹಾರ ನಿಧಿಗೆ 2 ಕೋಟಿ ರೂಪಾಯಿ ನೀಡಿದ್ದರು. ಅಷ್ಟೇ ಅಲ್ಲ, ಪಿಪಿಇ ಕಿಟ್, ಮಾಸ್ಕ್, ಕೊರೊನಾ ಟೆಸ್ಟಿಂಗ್ ಕಿಟ್ ಖರೀದಿಗಾಗಿ ಮುಂಬೈ ಮಹಾನಗರ ಪಾಲಿಕೆಗೆ 3 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇದೀಗ ಮತ್ತೆ ಸಿನಿ, ಕಿರುತೆರೆ ಕಾರ್ಮಿಕರ ಸಹಾಯಕ್ಕೆ ನಿಂತಿರುವುದು ನಿಜಕ್ಕೂ ಶ್ಲಾಘನೀಯ.
ಅಕ್ಷಯ್ ಕುಮಾರ್ ಮಾಡುತ್ತಿರುವ ಈ ಸಮಾಜಸೇವೆಗೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್, ಏಕ್ತಾ ಕಪೂರ್, ಸೋನುಸೂದ್ ಸೇರಿದಂತೆ ಸಾಕಷ್ಟು ಬಾಲಿವುಡ್ ಸ್ಟಾರ್ಗಳು ಕೊರೊನಾದೊಂದಿಗಿನ ಹೋರಾಟಕ್ಕೆ ಸಾಥ್ ನೀಡುತ್ತಾ ಬಂದಿದ್ದಾರೆ.