ತಮ್ಮ ಮಗಳು ನಿತಾರಾ ಜೊತೆಗೆ ವಾಯುವಿಹಾರಕ್ಕೆ ತೆರಳಿದ ನಟ ಅಕ್ಷಯ್ ಕುಮಾರ್, ರಸ್ತೆ ಬದಿ ಇದ್ದ ಬಡ ಕುಟುಂಬವೊಂದರ ಮನೆಯಲ್ಲಿ ಆತಿಥ್ಯವನ್ನು ಸ್ವೀಕರಿಸಿದ್ದಾರೆ. ದಾಹದಿಂದ ಈ ಬಡ ದಂಪತಿಯ ಮನೆಗೆ ತೆರಳಿದ ಅಕ್ಕಿ ಹಾಗೂ ನಿತಾರಾ ಕುಡಿಯಲು ನೀರು ಕೇಳಿದ್ದರಷ್ಟೇ. ಆದರೆ, ಆ ಬಡ ಕುಟುಂಬ ಇವರಿಗೆ ನೀರಿನ ಜೊತೆಗೆ ಸರಳವಾದ ಆತಿಥ್ಯ ಕೂಡಾ ನೀಡಿದ್ದಾರೆ.
ಬಡವರ ಗುಡಿಸಲಿಗೆ ಬಂದು ಬದುಕು ನೋಡಿದ ಬಾಲಿವುಡ್ ನಟ: ಸರಳತೆಗೆ ನೆಟ್ಟಿಗರ ಮೆಚ್ಚುಗೆ - ಅಕ್ಷಯ್ ಕುಮಾರ್ ಫ್ಯಾಮಿಲಿ
ಅಕ್ಷಯ್ ಕುಮಾರ್ ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ಬಂದಿರುವ ಬಾಲಿವುಡ್ ನಟ. ಸರಳಗೆ ಹೆಚ್ಚು ಒತ್ತು ನೀಡುವ ಈ 'ಕಿಲಾಡಿ' ಇದೀಗ ಸಾರ್ವಜನಿಕರು ಮೆಚ್ಚುವಂತಹ ಕಾರ್ಯವನ್ನು ಮಾಡಿದ್ದಾರೆ.
Akshay Kumar and Nitara
ಬಡ ದಂಪತಿಯ ಅಕ್ಕರೆಯನ್ನು ಮನಸಾರೆ ಮೆಚ್ಚಿಕೊಂಡ ಅಕ್ಷಯ್ ಕುಮಾರ್, ಟ್ವೀಟ್ ಮಾಡಿ ತನ್ನ ಮಗಳಿಗೆ ಇದೊಂದು ಪಾಠ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ನಾವು ಕುಡಿಯಲು ಹನಿ ನೀರು ಕೇಳಿದರೆ ಈ ದಂಪತಿ ನಮಗೆ ರೊಟ್ಟಿಯ ಜೊತೆಗೆ ಬೆಲೆ ಕಟ್ಟಲಾರದಷ್ಟು ಬೊಗಸೆ ಪ್ರೀತಿ ನೀಡಿದ್ದಾರೆ. ಇಂತವರ ನಡೆ ಎಲ್ಲಕ್ಕಿಂತಲೂ ಮಿಗಿಲು ಎಂದು ಬಡ ಕುಟುಂಬವನ್ನು ಕೊಂಡಾಡಿದ್ದಾರೆ. ನಟನ ಕಾಳಜಿ ಹಾಗೂ ಸರಳತೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಾಕಷ್ಟು ಮೆಚ್ಚುಗೆಯನ್ನು ಸಹ ಸೂಚಿಸಿದ್ದಾರೆ.
Last Updated : Nov 1, 2019, 4:59 PM IST