ಕರ್ನಾಟಕ

karnataka

ETV Bharat / sitara

ಜೈಸಲ್ಮೇರ್‌ನಲ್ಲಿದ್ದಾನೆ 'ಬಚ್ಚನ್ ಪಾಂಡೆ'.. ಇಂದಿನಿಂದ ಶೂಟಿಂಗ್​ ಶುರು - ನಟಿ ಕೃತಿ ಸನೋನ್

ಇಂದು ಚಿತ್ರದ ಕೆಲ ದೃಶ್ಯವನ್ನು ಜೈಸಲ್ಮೇರ್‌ನ ಅಲ್ಸುಬಾ ಹನುಮಾನ್ ಕ್ರಾಸ್‌ರೋಡ್​ನಲ್ಲಿ ಚಿತ್ರೀಕರಿಸಲಾಗಿದ್ದು, ಇದರಲ್ಲಿ ಬಸ್ ನಿಲ್ದಾಣದ ದೃಶ್ಯವನ್ನು ತೋರಿಸಲಾಗಿದೆ.

bachchan pandey
bachchan pandey

By

Published : Jan 6, 2021, 1:48 PM IST

ಆ್ಯಕ್ಷನ್​ ಕಿಂಗ್ ಅಕ್ಷಯ್​ ಕುಮಾರ್​ ಅಭಿನಯದ ಚಿತ್ರ 'ಬಚ್ಚನ್ ಪಾಂಡೆ' ಶೂಟಿಂಗ್ ಜೈಸಲ್ಮೇರ್​ನ ಸ್ವರ್ಣನಗರಿಯಲ್ಲಿ ಪ್ರಾರಂಭವಾಗಿದೆ. ಮುಖ್ಯ ಭೂಮಿಕೆಯಲ್ಲಿ ನಟಿ ಕೃತಿ ಸನೋನ್​ ಹಾಗೂ ಅರ್ಷದ್ ವಾರ್ಸಿ ಕಾಣಿಸಿಕೊಳ್ಳಲಿದ್ದಾರೆ.

ಕ್ಲಾಪ್​ ಮಾಡಿದ ಸಜೀದ್​ ನಾಡಿಯಾವಾಲ ಮಕ್ಕಳು

ಇಂದು ಚಿತ್ರದ ಕೆಲ ದೃಶ್ಯಗಳನ್ನು ಜೈಸಲ್ಮೇರ್‌ನ ಅಲ್ಸುಬಾ ಹನುಮಾನ್ ಕ್ರಾಸ್‌ರೋಡ್​ನಲ್ಲಿ ಚಿತ್ರೀಕರಿಸಲಾಗಿದ್ದು, ಇದರಲ್ಲಿ ಬಸ್ ನಿಲ್ದಾಣದ ದೃಶ್ಯವನ್ನು ತೋರಿಸಲಾಗಿದೆ. ಇದಕ್ಕಾಗಿ, ವಿವಿಧ ಪ್ರವಾಸಿ ತಾಣಗಳ ಚಿತ್ರ ಹಾಗೂ ಹೋರ್ಡಿಂಗ್‌ಗಳನ್ನು ನಿನ್ನೆ ಸಂಜೆ ಹನುಮಾನ್ ಕ್ರಾಸ್‌ರೋಡ್‌ನಲ್ಲಿರುವ ರಾಜ್ಯ ಗ್ರಂಥಾಲಯದ ಹೊರಗೆ ಇರಿಸಲಾಗಿತ್ತು. ಇಂದು ಅಲ್ಲೇ ದೃಶ್ಯ ಚಿತ್ರೀಕರಿಸಲಾಗಿದೆ.

ಬಚ್ಚನ್ ಪಾಂಡೆ ಶೂಟಿಂಗ್

ಇಂದು ಮುಂಜಾನೆ ಕೆಲ ದೃಶ್ಯಗಳನ್ನು ಚಿತ್ರೀಕರಿಸಿದ್ದು, ಫಿಲ್ಮ್​ ಟೀಂನೊಂದಿಗೆ ಕೆಲ ಸಾರ್ವಜನಿಕರೂ ಹಾಜರಿದ್ದರು. ಈ ಸಮಯದಲ್ಲಿ, ಅಲ್ಲಿದ್ದ ಯಾರೋ ಶೂಟಿಂಗ್‌ನ ಕೆಲವು ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ.

ಇನ್ನು ಚಿತ್ರದ ಹೆಚ್ಚಿನ ದೃಶ್ಯಗಳನ್ನು ಜೈಸಲ್ಮೇರ್​ನಲ್ಲಿಯೇ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಚಿಸಿದೆ. ಹಾಗಾಗಿ ಚಿತ್ರದ ಎಲ್ಲ ಮುಖ್ಯ ಪಾತ್ರಧಾರಿಗಳು ಇಂದೇ ಜೈಸಲ್ಮೇರ್​ ತಲುಪಿದ್ದಾರೆ.

ABOUT THE AUTHOR

...view details