ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿವಾಡಿ' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ನಟ ಅಜಯ್ ದೇವಗನ್ ಇಂದು ತಮ್ಮ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಟ್ವಟರ್ ಹ್ಯಾಂಡಲ್ನಲ್ಲಿ ದೇವಗನ್ ಅವರು ಚಿತ್ರದಲ್ಲಿ ತಮ್ಮ ಪಾತ್ರದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪಿಸ್ತಾ ಕಲರ್ ವಿಂಟೇಜ್ ಕಾರಿನ ಮುಂದೆ ಬಿಳಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶರ್ಟ್, ಬೂದು ಬಣ್ಣದ ಬ್ಲೇಜರ್, ಗಾಢ-ಕಂದು ಬಣ್ಣದ ಕ್ಯಾಪ್ ಧರಿಸಿ ಅಜಯ್ ಪೋಸ್ ನೀಡುತ್ತಿರುವ ಪೋಸ್ಟರ್ ಇದಾಗಿದೆ. 'ಗಂಗೂಬಾಯಿ ಕಥಿವಾಡಿ' ಸಿನಿಮಾದ ಟ್ರೈಲರ್ ನಾಳೆ ಬಿಡುಗಡೆಯಾಗುತ್ತಿದೆ ಎಂಬ ಸಿಹಿಸುದ್ದಿಯನ್ನು ಅಜಯ್ ದೇವಗನ್ ನೀಡಿದ್ದಾರೆ.