ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ, ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವುದು ಹಳೇ ಸುದ್ದಿ. ಇದೀಗ ಈ ಚಿತ್ರದಲ್ಲಿ ಅವರು ಪ್ಲೇ ಮಾಡಲಿರುವ ಪಾತ್ರ ಯಾವುದು ಎಂಬುದು ರಿವೀಲ್ ಆಗಿದೆ.
ಮೋಹಕ ಬೆಡಗಿ ಐಶ್ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರದು ನೆಗೆಟಿವ್ ರೋಲ್ ಆಗಿದ್ದು, ಈ ಪಾತ್ರಕ್ಕೆ ಐಶ್ ಅವರೇ ಸೂಕ್ತ ಎಂದು ನಿರ್ದೇಶಕರು ಡಿಸೈಡ್ ಮಾಡಿದ್ದಾರಂತೆ. ಬಚ್ಚನ್ ಫ್ಯಾಮಿಲಿಯ ಸೊಸೆ ಐಶ್, ಮಣಿರತ್ನಂ ಅವರ ಚಿತ್ರದಿಂದಲೇ ಬಣ್ಣದ ಲೋಕಕ್ಕೆ ಬಂದವರು. ಇದೀಗ ಅವರ ಚಿತ್ರದಲ್ಲಿಯೇ ಲೀಡ್ ರೋಲ್ ನಿಭಾಯಿಸಲಿದ್ದಾರೆ. ಮತ್ತೊಂದು ಇಂಟ್ರೆಸ್ಟಿಂಗ್ ಮ್ಯಾಟರ್ ಏನಂದ್ರೆ, ಈ ಚಿತ್ರದಲ್ಲಿ ಐಶ್ ಮಾವ ಅಮಿತಾಭ್ ಬಚ್ಚನ್ ಕೂಡ ನಟಿಸಲಿದ್ದಾರಂತೆ.