ಹೈದರಾಬಾದ್:ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಜನವರಿ 3 ರಂದು ನಗರಕ್ಕೆ ಬಂದಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಚಿತ್ರೀಕರಣದಲ್ಲಿ ನಟಿ ಭಾಗಿಯಾಗಲಿದ್ದಾರೆ.
ರತ್ನಂ ಅವರು 2019 ರ ಡಿಸೆಂಬರ್‌ನಲ್ಲಿ ಥೈಲ್ಯಾಂಡ್‌ನಲ್ಲಿ ಪೊನ್ನಿಯಿನ್ ಸೆಲ್ವನ್ ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದರು. ಚಲನಚಿತ್ರ ನಿರ್ಮಾಪಕರು ಈಗಾಗಲೇ 90 ದಿನಗಳ ಶೆಡ್ಯೂಲ್ಅನ್ನು ನಟರಾದ ಕಾರ್ತಿ, ಜಯಂ ರವಿ ಮತ್ತು ಐಶ್ವರ್ಯಾ ಲಕ್ಷ್ಮಿ ಅವರೊಂದಿಗೆ ಸಿದ್ಧಪಡಿಸಿದ್ದಾರೆ. ಮೊದಲ ವೇಳಾಪಟ್ಟಿಯನ್ನು ಮುಗಿಸಿದ್ದ ಚಿತ್ರತಂಡ ಕೊರೊನಾ ಕಾರಣದಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿತ್ತು.
ಇದೀಗ ಚಿತ್ರತಂಡ ಜ.6 ರಂದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಪುನಾರಂಭಿಸಿದೆ. ಚಿತ್ರದ ಎರಡನೇ ಶೆಡ್ಯೂಲ್ನಲ್ಲಿ ದೊಡ್ಡ ಸ್ಟಾರ್ ವರ್ಗವೇ ಸೇರ್ಪಡೆಗೊಳ್ಳಲಿದೆ. ಇನ್ನು ವೇಳಾಪಟ್ಟಿಗೂ ಮೊದಲೇ ಐಶ್ವರ್ಯಾ ಹೈದರಾಬಾದ್ಗೆ ಆಗಮಿಸಿದ್ದಾರೆ. ವರದಿಗಳ ಪ್ರಕಾರ, ಐಶ್ವರ್ಯಾ ಸುಮಾರು ಒಂದು ತಿಂಗಳ ಕಾಲ ನಗರದಲ್ಲಿದ್ದು, ಚಿತ್ರದ ತನ್ನ ಚಿತ್ರೀಕರಣ ಮುಗಿದ ಬಳಿಕ ಮತ್ತೆ ಮುಂಬೈಗೆ ತೆರಳಲಿದ್ದಾರೆ.