ಕರ್ನಾಟಕ

karnataka

ETV Bharat / sitara

ಕೊರೊನಾ ಸುಳಿಯಲ್ಲಿ ಬಚ್ಚನ್​ ಕುಟುಂಬ: ಐಶ್ವರ್ಯ ರೈ, ಪುತ್ರಿ ಆರಾಧ್ಯಾಗೂ ಸೋಂಕು ದೃಢ - ಕೊರೊನಾ ಸುಳಿಯಲ್ಲಿ ಬಚ್ಚನ್​ ಕುಟುಂಬ

ಬಾಲಿವುಡ್‌ ನಟಿ ಐಶ್ವರ್ಯ ರೈ ಹಾಗೂ ಅವರ ಮಗಳು ಆರಾಧ್ಯಾಳ ಕೋವಿಡ್​ ವರದಿ ಪಾಸಿಟಿವ್​ ಬಂದಿರುವುದಾಗಿ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ ಟ್ವೀಟ್​ ಮಾಡಿ ತಿಳಿಸಿದ್ದಾರೆ.

Aishwarya Rai Bachchan and her daughter Aaradhya Bachchan test positive for COVID 19
ಐಶ್ವರ್ಯ ರೈ, ಪುತ್ರಿ ಆರಾಧ್ಯಾಗೂ ಸೋಂಕು ದೃಢ

By

Published : Jul 12, 2020, 3:30 PM IST

ಮುಂಬೈ: ಬಾಲಿವುಡ್‌ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಪುತ್ರಿ ಆರಾಧ್ಯಾ ಬಚ್ಚನ್​ಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಬಚ್ಚನ್​ ಕುಟುಂಬದ ನಾಲ್ವರಿಗೆ ವೈರಸ್​ ಅಂಟಿದಂತಾಗಿದೆ.

ನಿನ್ನೆ ರಾತ್ರಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್​ರ ಕೋವಿಡ್​ ವರದಿ ಪಾಸಿಟಿವ್​ ಬಂದಿತ್ತು. ಇಂದು ಬೆಳಗ್ಗೆ ಅಮಿತಾಬ್​ರ ಪುತ್ರ ನಟ ಅಭಿಷೇಕ್​ ಬಚ್ಚನ್​ಗೆ ಕೂಡ ಸೋಂಕು ತಗುಲಿರುವುದು ದೃಢವಾಗಿತ್ತು.

ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ ಟ್ವೀಟ್

ಇದೀಗ ಐಶ್ವರ್ಯ ರೈ ಹಾಗೂ ಅವರ ಮಗಳು ಆರಾಧ್ಯಾಳ ಪರೀಕ್ಷಾ ವರದಿ ಪಾಸಿಟಿವ್​ ಬಂದಿರುವುದಾಗಿ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್​ ಬಚ್ಚನ್​ಗೆ ಸೋಂಕು ದೃಢಪಟ್ಟಿರುವುದು ತಿಳಿಯುತ್ತಿದ್ದಂತೆಯೇ ಅವರು ವಾಸವಿ ನಿವಾಸ 'ಜಲ್ಸಾ' ಬಂಗಲೆಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಸಿಬ್ಬಂದಿ ಸೀಲ್​ಡೌನ್​ ಮಾಡಿ, ಸ್ಯಾನಿಟೈಸ್‌ ಮಾಡಿದ್ದಾರೆ.

ABOUT THE AUTHOR

...view details