ಮುಂಬೈ: ಬಾಲಿವುಡ್ನಲ್ಲಿ ಹಲವು ಚಿತ್ರಗಳಲ್ಲಿ ಮಿಂಚಿ ಮರೆಯಾಗಿರುವ ನಟಿ ಆಯೇಷಾ ಟಕಿಯಾ, ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹೊಸದೊಂದು ಹೇಳಿಕೆ ನೀಡಿದ್ದಾರೆ.
ಕೆಲಸ ಮಾಡುವ ಸ್ಥಳದಲ್ಲಿ ನಾನು ಕೂಡಾ ಹಲವು ಬೆದರಿಕೆಗೆ ಗುರಿಯಾಗಿದ್ದೆ ಎಂದು ನಟಿ ಆಯೇಷಾ ಟಕಿಯಾ ಅವರು ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳೆಗೆ ಸಂದೇಶವನ್ನು ನೀಡಿದ್ದು ನೀವು ಕೂಡಾ ಬೆದರಿಕೆ ರೀತಿಯ ಅನುಭವವನ್ನು ಅನುಭವಿಸಿದರೆ ತಮ್ಮ ಆತ್ಮೀಯರ ಹತ್ತಿರ ಹೇಳಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.
ಚಲನಚಿತ್ರೋದ್ಯಮದಲ್ಲಿ ಹಲವು ನಟರುಗಳನ್ನು ಬೆದರಿಸುವ ಮೂಲಕ ಚಿತ್ರರಂಗದಿಂದ ದೂರವಿರಲು ಪ್ರೇರೇಪಿಸಲಾಗುತ್ತಿದೆ. ಬಾಲಿವುಡ್ನಲ್ಲಿ ಇದು ಹೆಚ್ಚಾಗಿ ನಡೆಯುತ್ತಿದ್ದು, ಬೆದರಿಸುವ ಮೂಲಕ ದೂರವಿರಿಸಲಾಗಿದೆ. ಇದು ಬಾಲಿವುಡ್ ವಲಯದ ಕುಖ್ಯಾತಿಗೆ ಕಾರಣವಾಗಿದೆ.
"ವೈಯಕ್ತಿಕವಾಗಿ ಟ್ರೋಲಿಂಗ್ ಮತ್ತು ಕೆಲಸದ ಸ್ಥಳದ ಬೆದರಿಸುವಿಕೆಯ ಅನೇಕ ಘಟನೆಗಳ ಮೂಲಕ ನಾನು ಈ ಬಗ್ಗೆ ಹೇಳಲು ಬಯಸುತ್ತೇನೆ. ಮತ್ತು ನೀವು ಮಾತನಾಡಬೇಕು ಎಂದು ನಾನು ಬಯಸುತ್ತೇನೆ, ದಯವಿಟ್ಟು ಯಾರಾದರೂ ನಿಮ್ಮನ್ನು ಕಡಿಮೆ, ಸಣ್ಣ ಅಥವಾ ನಿಷ್ಪ್ರಯೋಜಕ ಎಂದು ಭಾವಿಸುತ್ತಿದ್ದರೆ ಅದನ್ನ ಎದುರಿಸಿ" ಎಂದು ಅವರು ಯಾವುದೇ ಹೆಸರನ್ನು ತೆಗೆದುಕೊಳ್ಳದೇ ಹೇಳಿದ್ದಾರೆ.
ಓದಿ:ಸುಶಾಂತ್ ಪ್ರಕರಣ: ಸಲ್ಮಾನ್, ಕರಣ್ ಜೋಹರ್ ಸೇರಿ ಬಾಲಿವುಡ್ ದಿಗ್ಗಜರ ವಿರುದ್ಧ ದೂರು
"ನೀವು ನಂಬಲಾಗದ ಮತ್ತು ಅನನ್ಯ ಎಂದು ದಯವಿಟ್ಟು ತಿಳಿದುಕೊಳ್ಳಿ. ನೀವು ಇಲ್ಲಿರಲು ಮತ್ತು ನೀವು ಅರ್ಹವಾದದ್ದಕ್ಕಾಗಿ ಹೋರಾಡಲು ಉದ್ದೇಶಿಸಿದ್ದೀರಿ. ನೀವು ಪ್ರಕಾಶಮಾನ ಮತ್ತು ವಿಭಿನ್ನರು, ನೀವು ಅವರನ್ನು ಗೆಲ್ಲಲು ಬಿಡಬಾರದು. ದಯವಿಟ್ಟು ಯಾರೊಂದಿಗಾದರೂ ಮಾತನಾಡಿ " ಎಂದು ಟಕಿಯಾ ಮಂಗಳವಾರ ಬರೆದುಕೊಂಡಿದ್ದಾರೆ.
ಆಯೇಷಾ ಟಕಿಯಾ 2004 ರ ಟಾರ್ಜನ್: ದಿ ವಂಡರ್ ಕಾರ್ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಸೋಚಾ ನಾ ಥಾ, ಸಲಾಮ್-ಎ-ಇಶ್ಕ್, ಸಂಡೇ ಮತ್ತು ವಾಂಟೆಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.