ಕರ್ನಾಟಕ

karnataka

ETV Bharat / sitara

ಲಿಗರ್ ಗೂ ಬಿಡುಗಡೆಗೂ ಮೊದಲೇ ಕತ್ರಿನಾ ಜೊತೆ ವಿಜಯ್​ ದೇವರಕೊಂಡ ನಟನೆ! - ವಿಜಯ್ ದೇವರಕೊಂಡ ಅನನ್ಯ ಪಾಂಡೆ

ಈ ಪರಿಕಲ್ಪನೆಯಡಿ ಮೊದಲು ಒಂದು ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ನಂತರ ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಅವುಗಳನ್ನಿ ಡಬ್ ಮಾಡಲಾಗುವುದು..

devarakonda
devarakonda

By

Published : May 5, 2021, 3:42 PM IST

ಹೈದರಾಬಾದ್ : ತೆಲುಗು ಸೂಪರ್​ ಸ್ಟಾರ್​ ವಿಜಯ್ ದೇವರಕೊಂಡ ಲಿಗರ್ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ಈ ಬಾಲಿವುಡ್ ಚೊಚ್ಚಲ ಚಿತ್ರ ಇನ್ನೂ ನಿರ್ಮಾಣ ಹಂತದಲ್ಲಿದ್ದರೂ, ವಿಜಯ್​ ಮತ್ತೊಂದು ಹಿಂದಿ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ . ಈ ಚಿತ್ರದ ನಾಯಕಿ ಕತ್ರಿನಾ ಕೈಫ್​ ಎನ್ನಲಾಗಿದೆ.

ಇತ್ತೀಚಿನ ಪ್ಯಾನ್ ಇಂಡಿಯಾ ಪರಿಕಲ್ಪನೆಯಡಿ ಈ ಸಿನಿಮಾ ನಿರ್ಮಾಣವಾಗಲಿದೆ. ಪ್ಯಾನ್ ಇಂಡಿಯಾ ಮೂಲಕ ಪ್ರೇಕ್ಷಕರನ್ನು ತಲುಪಲು ಹೊರಟಿರುವ ಸೂಪರ್‌ಸ್ಟಾರ್‌ ಪಟ್ಟಿಯಲ್ಲಿ ವಿಜಯ್ ಕೂಡ ಇದ್ದಾರೆ.

ಈ ಪರಿಕಲ್ಪನೆಯಡಿ ಮೊದಲು ಒಂದು ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ನಂತರ ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಅವುಗಳನ್ನಿ ಡಬ್ ಮಾಡಲಾಗುವುದು.

ವಿಜಯ್ ತಮ್ಮ ಮೊದಲ ಬಾಲಿವುಡ್​ ಸಿನಿಮಾ ಲಿಗರ್ ಚಿತ್ರದಲ್ಲಿ ಅನನ್ಯ ಪಾಂಡೆ ಜೊತೆ ನಟಿಸುತ್ತಿದ್ದಾರೆ. ಆದರೆ, ಅನನ್ಯ ಜೊತೆ ದೇವರಕೊಂಡರನ್ನು ತೆರೆ ಮೇಲೆ ನೋಡುವ ಮೊದಲೇ ಕ್ಯಾಟ್​ ಕತ್ರಿನಾ ಕೈಫ್​ ಜೊತೆ ವಿಜಯ್​ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ವಿಜಯ್​ ಈಗಾಗಲೇ ಕತ್ರಿನಾ ಅವರೊಂದಿಗೆ ಮತ್ತೊಂದು ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ದೇವರಕೊಂಡ ಅವರ ಅಭಿಮಾನಿಗಳು ಅವರ ಮುಂಬರುವ ಹಿಂದಿ ಯೋಜನೆಯ ಬಗ್ಗೆ ಉತ್ಸುಕರಾಗಿದ್ದಾರೆ.

ಈ ಮಧ್ಯೆ ಪುರಿ ಜಗನ್ನಾಥ್ ನಿರ್ದೇಶನದ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಅಡಿ ಮೂಡಿ ಮಾಡುತ್ತಿರುವ ಲಿಗರ್‌ ಪ್ಯಾನ್-ಇಂಡಿಯಾ ಚಿತ್ರವಾಗಿ ಬಿಲ್ಡ್‌ ಮಾಡಲಾಗಿದೆ.

ABOUT THE AUTHOR

...view details