ಕರ್ನಾಟಕ

karnataka

ETV Bharat / sitara

ಆ ಪೋಸ್ಟ್​​ಗೆ ಬಂದವು ಅತಿ ಕೆಟ್ಟ ಕಮೆಂಟ್ಸ್​​​...  ಫೋಟೋ ಡಿಲೀಟ್​ ಮಾಡಿ ಕ್ಷಮೆ ಕೇಳಿದ ನಟನ ಪತ್ನಿ! - ಬುದ್ಧನ ಪುತ್ಥಳಿ

ಲೇಖಕಿ ತಾಹಿರಾ ಕಶ್ಯಪ್​ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದ ಫೋಟೋವೊಂದನ್ನು ಡಿಲೀಟ್​ ಮಾಡಿದ್ದಾರೆ. ನೆಟಿಜನ್ಸ್​​​ನಿಂದ ಕೇಳಿ ಬಂದ ಆಕ್ಷೇಪ ಹಾಗೂ ಟ್ರೋಲ್​ಗಳನ್ನು ನೋಡಿದ ಬಳಿಕ ಅದನ್ನು ತಮ್ಮ ಖಾತೆಯಿಂದ ಅಳಿಸಿ ಹಾಕಿ ಕ್ಷಮೆ ಕೇಳಿದ್ದಾರೆ.

ಲೇಖಕಿ ತಾಹಿರಾ ಕಶ್ಯಪ್​

By

Published : Jun 20, 2019, 10:09 AM IST

ಜಾಲಿ ಮೂಡ್​ನಲ್ಲಿದ್ದ ತಾಹಿರಾ ಬುದ್ಧನ ಪುತ್ಥಳಿಯ ಮೇಲೆ ಕುಳಿತಿದ್ದ ಫೋಟೋವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಟ್ರೋಲ್​ಗೆ ತುತ್ತಾಗಿತ್ತು. ಅಲ್ಲದೇ ಹಲವರು ಫೋಟೋ ನೋಡಿ ಬುದ್ಧನ ಕೈಮೇಲೆ ಮೇಲೆ ಕುಳಿತಿದ್ದು ಸರಿಯಲ್ಲ ಎಂದು ಟೀಕಿಸುವ ಮೂಲಕ ಮನಬಂದಂತೆ ಕಾಮೆಂಟ್​ ಹಾಕಿದ್ದರು. ಈ ತಹರದ ಆಕ್ರೋಶಭರಿತ ಕಾಮೆಂಟ್​ಗಳು ಕೇಳಿ ಬರುತ್ತಿದ್ದಂತೆ ತಾಹಿರಾ ಫೋಟೋವನ್ನು ಡಿಲೀಟ್​ ಮಾಡಿದ್ದಾರೆ.

ಇದಲ್ಲದೇ ಈ ಬಗ್ಗೆ ಕ್ಷಮೆಯನ್ನು ಸಹ ಕೇಳಿದ್ದಾರೆ. ಈ ಘಟನೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.ತಾಹಿರಾ ಕಶ್ಯಪ್​, ಬಾಲಿವುಡ್​ ನಟ, ಗಾಯಕ ಆಯುಷ್ಮಾನ್​ ಖುರಾನಾ ಅವರ ಪತ್ನಿಯಾಗಿದ್ದು ಕ್ಯಾನ್ಸರ್​ ರೋಗದಿಂದ ಬಳಲುತ್ತಿದ್ದವರು ಇದೀಗ ಅದರಿಂದ ಹೊರಬಂದಿದ್ದಾರೆ.

ABOUT THE AUTHOR

...view details